ಕಾಸರಗೋಡು:  ಮಾದಕ ನಟಿ ಸನ್ನಿ ಲಿಯೋನಿ ಅವರು ಕಾಸರಗೋಡಿನ ಬೀದಿಗಳಲ್ಲಿ ಸಖತ್ ಹಾಟ್ ಬಟ್ಟೆಯಲ್ಲಿ ಓಡಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
 
									
								
			        							
								
																	ಇನ್ನೂ ತಮ್ಮ ನೆಚ್ಚಿನ ನಟಿಯನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಹೌದು ಸನ್ನಿ ಲಿಯೋನಿ ಅವರು ತಮ್ಮ ಮುಂಬರುವ ಸಿನಿಮಾದ ಶೂಟಿಂಗ್‌ಗಾಗಿ ಕಾಸರಗೋಡಿಗೆ ಬಂದಿದ್ದಾರೆ. ಇಲ್ಲಿನ ಸೀತಂಗೋಳಿ ಸಮೀಪದ ಶೇಣಿ ಎಂಬಲ್ಲಿ ಸನ್ನಿ ಲಿಯೋನಿ ಅವರ ಹಿಂದಿ ಸಿನಿಮಾ ಶೂಟಿಂಗ್ ನಡೆಯುತ್ತಿದೆ.
									
										
								
																	ಇದೀಗ ಸನ್ನಿ ಲಿಯೋನಿ ಅವರು ಕಾಸರಗೋಡಿಗೆ ಬಂದಿರುವುದು ಗೊತ್ತಾಗಿ ಅವರ ಅಭಿಮಾನಿಗಳು ಅವರನ್ನು ನೋಡಲು ಮುಗಿಬಿದ್ದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಸನ್ನಿ ಸಖತ್ ಹಾಟ್ ಬಟ್ಟೆಯಲ್ಲಿ ರೋಡ್‌ನಲ್ಲಿ ನಡೆದುಕೊಂಡು ಹೋಗುತ್ತಿರುವುದು ಸೆರೆಯಾಗಿದೆ.
									
											
							                     
							
							
			        							
								
																	ಶೇಣಿಯ ಶಾಲೆ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಈ ಹಿನ್ನೆಲೆ ಮಾದಕ ನಟಿಯ ಅಭಿನಯವನ್ನು ನೋಡಲು ರಸ್ತೆಯ ಇಕ್ಕೆಲಗಳಲ್ಲಿ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ಅಭಿಮಾನಿಗಳನ್ನು ನಿಯಂತ್ರಿಸಲು ಚಿತ್ರತಂಡ ಹರಸಾಹಸ ಪಟ್ಟಿತು.