Select Your Language

Notifications

webdunia
webdunia
webdunia
webdunia

‘ಅಯೋಗ್ಯ’ ಸಿನಿಮಾದಲ್ಲಿ ಸುನೀಲ್ ಹಾಡಿನ ಮೋಡಿ

‘ಅಯೋಗ್ಯ’ ಸಿನಿಮಾದಲ್ಲಿ ಸುನೀಲ್ ಹಾಡಿನ ಮೋಡಿ
ಬೆಂಗಳೂರು , ಶನಿವಾರ, 4 ಆಗಸ್ಟ್ 2018 (07:39 IST)
ಬೆಂಗಳೂರು: ಜೀ ಕನ್ನಡದ ಸರಿಗಮಪ ಕಾರ್ಯಕ್ರಮದಲ್ಲಿ ಹಾಡಿ ಎಲ್ಲರ ಮನಸ್ಸು ಗೆದ್ದ ಗಾಯಕ ಸುನೀಲ್ ಈಗ ಸಿನಿಮಾವೊಂದಕ್ಕೆ ಹಾಡನ್ನು ಹಾಡಿದ್ದಾರೆ. ಅಷ್ಟೇ ಅಲ್ಲ ಸುನೀಲ್ ಅವರ ಹಾಡು ಸೂಪರ್ ಹಿಟ್ ಆಗಿದೆ.

ಸುನೀಲ್ ಹಾಡಿರುವುದು 'ಅಯೋಗ್ಯ' ಸಿನಿಮಾಗಾಗಿ. ಈ ಸಿನಿಮಾದ ಉಳಿದ ಹಾಡುಗಳಂತೆ ಸುನೀಲ್ ಹಾಡಿರುವ ಈ ಹಾಡು ಜನರ ಮನ್ನಣೆ ಗಳಿಸಿದೆ. ಸದ್ಯ ಯೂಟ್ಯೂಬ್ ನಲ್ಲಿ 44ನೇ ಟ್ರೆಂಡಿಂಗ್ ವಿಡಿಯೋ ಇದಾಗಿದೆ. ಈ ಹಾಡು ಈಗ ಎರಡು ಲಕ್ಷದ ಗಡಿ ದಾಟುತ್ತಿದೆ.


ಇನ್ನು ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಸರಿಗಮಪ ಕಾರ್ಯಕ್ರಮದ ಸುನೀಲ್ ಗೆ ಒಂದು ಅವಕಾಶ ನೀಡಿದ್ದಾರೆ. ಪಕ್ಕಾ ಲೋಕಲ್ ಆಗಿರುವ ಈ ಹಾಡನ್ನು ಸುನೀಲ್ ಬಹಳ ಸೊಗಸಾಗಿ ಹಾಡಿ ಮೆಚ್ಚುಗೆ ಗಳಿಸಿದ್ದಾರೆ.

ಅಂದಹಾಗೆ, 'ಅಯೋಗ್ಯ' ಚಿತ್ರದಲ್ಲಿ ಸತೀಶ್ ನೀನಾಸಂ ಜೋಡಿಯಾಗಿ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ

 


Share this Story:

Follow Webdunia kannada

ಮುಂದಿನ ಸುದ್ದಿ

ಪ್ಯಾರಿಸ್ ನಲ್ಲಿ ಜಾಲಿ ಮೂಡ್ ನಲ್ಲಿ ನಟಿ ಅಮೂಲ್ಯ