Select Your Language

Notifications

webdunia
webdunia
webdunia
webdunia

ಪುನೀತ್, ಸುದೀಪ್, ರಕ್ಷಿತ್ ಶೆಟ್ಟಿ ಮೂವರನ್ನು ಸೇರಿಸಿ ಸಿನಿಮಾ ಮಾಡ್ತಾರಂತೆ ನಿರ್ಮಾಪಕ ಕೆ . ಮಂಜು

ಪುನೀತ್, ಸುದೀಪ್, ರಕ್ಷಿತ್ ಶೆಟ್ಟಿ ಮೂವರನ್ನು ಸೇರಿಸಿ ಸಿನಿಮಾ ಮಾಡ್ತಾರಂತೆ ನಿರ್ಮಾಪಕ ಕೆ . ಮಂಜು
ಬೆಂಗಳೂರು , ಶುಕ್ರವಾರ, 3 ಆಗಸ್ಟ್ 2018 (07:34 IST)
ಬೆಂಗಳೂರು : ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ಪವರ್ ಸ್ಟಾರ್ ಪುನೀತ್, ಕಿಚ್ಚ ಸುದೀಪ್ ಹಾಗೂ ರಕ್ಷಿತ್ ಶೆಟ್ಟಿ ಮೂವರು ಒಟ್ಟಿಗೆ ಸಿನಿಮಾ ಮಾಡುತ್ತಿದ್ದು ನಿರ್ಮಾಪಕ ಕೆ . ಮಂಜು ಅವರು  ಈ ಮೂವರನ್ನು ಒಟ್ಟಿಗೆ ಸೇರಿಸುವ ಪ್ರಯತ್ನ ಮಾಡ್ತಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಈ ಸುದ್ದಿ ಕೇಳಿ ಇವರ ಅಭಿಮಾನಿಗಳ ಸಂಭ್ರಮ ಹೆಚ್ಚಾಗಬಹುದು.


ಆದರೆ ಈ ಬಗ್ಗೆ ನಿರ್ಮಾಪಕ ಕೆ . ಮಂಜು ಅವರಲ್ಲಿಕೇಳಿದಾಗ ಅವರು ಹೇಳಿದ್ದು ಹೀಗೆ – ‘ಎಲ್ಲರೂ ಒಟ್ಟಿಗೆ ಕಾಣಿಸಿಕೊಳ್ತಿರೋದು ನಿಜ , ಆದರೆ ಒಂದೇ ಸಿನಿಮಾದಲ್ಲಿ ಅಲ್ಲ , ಒಂದೇ ಕಾರ್ಯಕ್ರಮದಲ್ಲಿ . ಚಿತ್ರದುರ್ಗದಲ್ಲಿ ವಿಷ್ಣುವರ್ಧನ್ ಜನ್ಮ ದಿನದಂದು ಈ ಮೂವರು ಒಟ್ಟಿಗೆ ಸೇರುತ್ತಿದ್ದಾರೆ’ ಎಂದಿದ್ದಾರೆ.


ಹಾಗೇ  ತನ್ನ ಮಗನ ಪಡ್ಡೆಹುಲಿ ಚಿತ್ರದ ಅಡಿಯೋ ರಿಲೀಸ್ ಕಾರ್ಯಕ್ರಮಕ್ಕಾಗಿ ಈ ಮೂವರು ನಟರು ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ. ಈ‌ ಮೂರು ಸ್ಟಾರ್ ಗಳನ್ನು ಸೇರಿಸಿ ಅಡಿಯೋ ರಿಲೀಸ್ ಮಾಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇವರಿಗಾಗಿ ಸಿನಿಮಾ ಕೂಡ ಮಾಡುತ್ತೇನೆ . ಅದೇನು ದೊಡ್ಡ ವಿಷಯವಲ್ಲ , ಒಳ್ಳೆಯ ಕಥೆ ಸಿಗಬೇಕು ಅಷ್ಟೇ’ ಎಂದಿದ್ದಾರೆ. ಇದರಿಂದ ಅಭಿಮಾನಿಗಳಿಗೆ ಕೊಂಚ ಬೇಸರವಾದರೂ ಕೂಡ ಒಂದೇ ಕಾರ್ಯಕ್ರಮದಲ್ಲಿ ಮೂವರನ್ನು ಒಟ್ಟಿಗೆ ನೋಡುವ ಭಾಗ್ಯ ಅಭಿಮಾನಿಗಳಿಗೆ ಸಿಗಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳಿನ ಬಿಗ್ ಬಾಸ್ 2 ಶೋ ನಿರೂಪಣೆಯಲ್ಲಿ ಎಡವಟ್ಟು ಹೇಳಿಕೆ; ಕಮಲ್ ಹಾಸನ್ ವಿರುದ್ಧ ದೂರು ದಾಖಲು