ಜಾಕ್ವೆಲಿನ್​ಗೆ ಲವ್ ಲೆಟರ್ ಬರೆದ ಸುಕೇಶ್

Webdunia
ಬುಧವಾರ, 8 ಮಾರ್ಚ್ 2023 (13:34 IST)
ಸುಕೇಶ್ ಚಂದ್ರಶೇಖರ್ ನಡೆಸಿದ 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ನಟಿ ಜಾಕ್ವೆಲಿನ್​ ಫರ್ನಾಂಡಿಸ್​ಗೆ ಸಾಕಷ್ಟು ತೊಂದರೆ ಆಗುತ್ತಿದೆ. ಅವರು ನಿರಂತರವಾಗಿ ವಿಚಾರಣೆ ಎದುರಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಅವರಿಗೆ ಮುಕ್ತಿ ಸಿಗದಂತಾಗಿದೆ. ಇದರ ಜೊತೆಗೆ ಸುಕೇಶ್ ಚಂದ್ರಶೇಖರ್ ಜೈಲಿನಲ್ಲಿದ್ದುಕೊಂಡೇ ಜಾಕ್ವೆಲಿನ್​ಗೆ ಕಿರಿಕಿರಿ ಉಂಟು ಮಾಡುತ್ತಿದ್ದಾನೆ. ಹೋಳಿ ಸಂದರ್ಭದಲ್ಲಿ ಆತ ನಟಿಗೆ ಲವ್ ಲೆಟರ್ ಬರೆದಿದ್ದಾನೆ. ಈ ವೇಳೆ ‘ಲವ್​ ಯೂ ಬೇಬಿ’ ಎಂದು ಸುಕೇಶ್ ಪತ್ರದಲ್ಲಿ ಬರೆದಿದ್ದಾನೆ. ‘ಒಳ್ಳೆಯ ವ್ಯಕ್ತಿ, ನನ್ನ ಬ್ಯೂಟಿಫುಲ್ ಜಾಕ್ವೆಲಿನ್​ಗೆ ಹೋಳಿ ಶುಭಾಶಯ. ಈ ದಿನ ಬಣ್ಣಗಳ ಹಬ್ಬ. ಮರೆಯಾದ ಬಣ್ಣಗಳು 100 ಪಟ್ಟು ಹೆಚ್ಚಾಗಿ ನಿಮ್ಮ ಬಳಿ ಬರುತ್ತವೆ. ಈ ವರ್ಷ ನಿಮ್ಮ ಬದುಕು ಪ್ರಕಾಶಮಾನವಾಗುತ್ತದೆ. ಆ ರೀತಿ ಆಗುವಂತೆ ಮಾಡೋದು ನನ್ನ ಜವಾಬ್ದಾರಿ’ ಎಂದು ಅವರು ಪತ್ರ ಆರಂಭಿಸಿದ್ದಾರೆ.ಐ ಲವ್​ ಯೂ ಮೈ ಬೇಬಿ ಗರ್ಲ್​. ಯಾವಾಗಲೂ ನಗುತ್ತಾ ಇರು. ಲವ್ ಯು ಮೈ ಪ್ರಿನ್ಸೆಸ್. ನಾನು ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನನ್ನ ಬೊಮ್ಮ ನೀನು, ನನ್ನ ಪ್ರೀತಿ’ ಎಂದು ಪತ್ರದಲ್ಲಿ ಸುಕೇಶ್ ಬರೆದುಕೊಂಡಿದ್ದಾನೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮದುವೆ ದಿನ ಸಮಂತಾ ಪತಿ ರಾಜ್ ನಿಡಿಮೋರು ಬಗ್ಗೆ ಈ ವಿಚಾರ ಹೆಚ್ಚು ಹುಡುಕಾಟ

ದರ್ಶನ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್‌: ಚಾಲೆಂಜಿಂಗ್‌ ಸ್ಟಾರ್‌ ಧ್ವನಿಯಲ್ಲೇ ಡೆವಿಲ್ ಟ್ರೇಲರ್ ದಿನಾಂಕ ರಿವಿಲ್‌

ನಿರ್ದೇಶಕ ರಾಜ್ ನಿಡಮೋರು ಜೊತೆ ಸದ್ದಿಲ್ಲದೇ ಮದುವೆಯಾದ ಸಮಂತಾ

ರಣಬೀರ್ ಕಪೂರ್ ದೈವದ ಅಪಹಾಸ್ಯ ಮಾಡುತ್ತಿದ್ದಾಗ ಸುಮ್ಮನಿದ್ರಾ ರಿಷಬ್ ಶೆಟ್ಟಿ: ಅಸಲಿ ವಿಡಿಯೋ ಇಲ್ಲಿದೆ

ರಣವೀರ್ ಸಿಂಗ್ ದೈವವನ್ನು ಅನುಕರಿಸಿ, ದೆವ್ವ ಎಂದರೂ ನಗುತ್ತಲೇ ಕೂತಾ ರಿಷಬ್ ಶೆಟ್ಟಿ, ಭಾರೀ ಆಕ್ರೋಶ

ಮುಂದಿನ ಸುದ್ದಿ
Show comments