Select Your Language

Notifications

webdunia
webdunia
webdunia
webdunia

ಮಗಳ ಸಿನಿ ಕೆರಿಯರ್ ಬಗ್ಗೆ ಸುಧಾರಾಣಿ ಫೈನಲ್ ಮಾತು

ಮಗಳ ಸಿನಿ ಕೆರಿಯರ್ ಬಗ್ಗೆ ಸುಧಾರಾಣಿ ಫೈನಲ್ ಮಾತು
ಬೆಂಗಳೂರು , ಸೋಮವಾರ, 28 ಡಿಸೆಂಬರ್ 2020 (11:03 IST)
ಬೆಂಗಳೂರು: ನಟಿ ಸುಧಾರಾಣಿ ತಮ್ಮ ಪುತ್ರಿ ನಿಧಿ ಸಿನಿ ರಂಗಕ್ಕೆ ಎಂಟ್ರಿ ಕೊಡುತ್ತಾರೆ ಎಂಬ ಸುದ್ದಿಗಳ ಬಗ್ಗೆ ಕಲರ್ಸ್ ಕನ್ನಡ ಚ್ಯಾಟ್ ಶೋನಲ್ಲಿ ಸ್ಪಷ್ಟ ಉತ್ತರ ನೀಡಿದ್ದಾರೆ.


ಈ ಹಿಂದೆ ನಿಧಿ, ಜೋಗಿ ಪ್ರೇಮ್ ಅವರ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಾರೆ ಎಂದೆಲ್ಲಾ ಸುದ್ದಿಯಿತ್ತು. ಆದರೆ ಅದು ಸುಳ್ಳಾಗಿತ್ತು. ಈಗ ಸ್ವತಃ ಸುಧಾರಾಣಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ‘ನನ್ನ ಮಗಳು ಸಿನಿಮಾ ರಂಗಕ್ಕೆ ಬರುತ್ತಿಲ್ಲ. ಆಕೆಯ ಗಮನ ಓದುವುದರಲ್ಲಿದೆ. ಲಾ ಓದುತ್ತಿದ್ದಾಳೆ. ಅವಳಿಗೆ ಸಿನಿಮಾದಲ್ಲಿ ಇಂಟ್ರೆಸ್ಟೂ ಇಲ್ಲ. ಯಾವತ್ತೂ ಓದುತ್ತಲೇ ಇರ್ತಾಳೆ’ ಎಂದಿದ್ದಾರೆ. ಈ ಶೋನಲ್ಲಿ ನಿಧಿ ಕೂಡಾ ಪಾಲ್ಗೊಂಡಿದ್ದರು. ಈ ವೇಳೆ ಅವರೂ ಅಮ್ಮನ ಮಾತನ್ನು ಅನುಮೋದಿಸಿದ್ದಾರೆ. ನನಗೆ ಸಿನಿಮಾಗೆ ಬರುವ ಇಂಟ್ರೆಸ್ಟ್ ಇಲ್ಲ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾನು ಅನುಭವಿಸಿದ ನೋವಿನ ಮುಂದೆ ಕರೋನಾ ಏನೂ ಇಲ್ಲ ಬಿಡಿ: ಜಗ್ಗೇಶ್