Select Your Language

Notifications

webdunia
webdunia
webdunia
webdunia

ಜಯಂ ರವಿ ಕುಟುಂಬದಲ್ಲಿ ಬಿರುಗಾಳಿ, 15ವರ್ಷದ ದಾಂಪತ್ಯಕ್ಕೆ ಅಂತ್ಯ ಹಾಡುತ್ತಾರಾ ಕಾಲಿವುಡ್ ನಟ

Jayam Ravi

Sampriya

ತಮಿಳು , ಬುಧವಾರ, 26 ಜೂನ್ 2024 (17:41 IST)
Photo Courtesy X
ತಮಿಳು:  ಕಾಲಿವುಡ್‌ನ ಖ್ಯಾತ ನಟ ಜಯಂ ರವಿ ಅವರು ಇದೀಗ ತಮ್ಮ ವೈಯಕ್ತಿಕ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ.

2009ರಲ್ಲಿ ಆರತಿ ಅವರನ್ನು ಮದುವೆಯಾದ ಜಯಂ ರವಿ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿಯಿದೆ. ಇದಕ್ಕೆಲ್ಲ ಕಾರಣ ಆರತಿ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಿಂದ ತಮ್ಮ ಪತಿಯೊಂದಿಗಿನ ಫೋಟೋಗಳನ್ನು ಅಳಿಸಿ ಹಾಕಿರುವುದು ಊಹಾಪೋಹವನ್ನು ಇನ್ನಷ್ಟು ಹೆಚ್ಚಿಸಿದೆ. ಅದಲ್ಲದೆ  ಆರತಿ ಅವರ ಹೊಸ ಇನ್‌ಸ್ಟಾಗ್ರಾಮ್ ಅಪ್‌ಡೇಟ್ ಅವರ ಅಭಿಮಾನಿಗಳನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ.

ಈ ಮೂಲಕ 15 ವರ್ಷದ ದಾಂಪತ್ಯ ಜೀವನಕ್ಕೆ ಈ ಜೋಡಿ ಅಂತ್ಯ ಹಾಡುತ್ತಾರಾ ಎಂಬ ಸುದ್ದಿ ಕಾಲಿವುಡ್ ಅಂಗಳದಲ್ಲಿ ಜೋರಾಗಿ ಹಬ್ಬಿದೆ.  

ಜಯಂ ಅವರು  2009ರಲ್ಲಿ ಪ್ರಸಿದ್ಧ ದೂರದರ್ಶನ ನಿರ್ಮಾಪಕಿ ಸುಜಾತಾ ವಿಜಯಕುಮಾರ್ ಅವರ ಮಗಳು ಆರತಿಯನ್ನು ವಿವಾಹವಾದರು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

ಜಯಂ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಅವರು ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ - 1 ಮತ್ತು 2 ರಲ್ಲಿ ಮಹಾನ್ ಚೋಳ ಚಕ್ರವರ್ತಿ ರಾಜ ರಾಜ ಚೋಳ ಎಂದು ಕರೆಯಲ್ಪಡುವ ಅರುಲ್ಮೋಳಿ ವರ್ಮನ್ ಪಾತ್ರವನ್ನು ಸಹ ನಿರ್ವಹಿಸಿದ್ದಾರೆ.

ಜಯಂ ಅವರು ಇರೈವನ್ ಮತ್ತು ಸೈರನ್‌ನಲ್ಲಿ ನಿರ್ಣಾಯಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ನಟನೆಗೆ ಮೊದಲು, ಜಯಂ ಅವರು ಕಮಲ್ ಹಾಸನ್ ನಟಿಸಿದ ಆಳವಂದನ್ (2001) ನಲ್ಲಿ ಸುರೇಶ್ ಕೃಷ್ಣ ಅವರಿಗೆ ಸಹಾಯಕ ನಿರ್ದೇಶಕರಾಗಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ರೇಣುಕಾಸ್ವಾಮಿ ಕುಟುಂಬಕ್ಕೆ ಹಣ ಸಹಾಯ ಮಾಡಿದ ಧ್ರುವ ಸರ್ಜಾ ಫ್ಯಾನ್ಸ್‌