Select Your Language

Notifications

webdunia
webdunia
webdunia
webdunia

ಮತ್ತೊಂದು ಸಿನಿಮಾಗೆ ರೆಡಿಯಾದ ಸೃಜನ್ ಲೋಕೇಶ್

ಮತ್ತೊಂದು ಸಿನಿಮಾಗೆ ರೆಡಿಯಾದ ಸೃಜನ್ ಲೋಕೇಶ್
ಬೆಂಗಳೂರು , ಶುಕ್ರವಾರ, 18 ಅಕ್ಟೋಬರ್ 2019 (09:19 IST)
ಬೆಂಗಳೂರು: ಎಲ್ಲಿದ್ದೆ ಇಲ್ಲಿ ತನಕ ಸಿನಿಮಾ ಯಶಸ್ಸಿನಿಂದ ಹಿಗ್ಗಿರುವ ನಟ ಸೃಜನ್ ಲೋಕೇಶ್ ಈಗ ಕಿರುತೆರೆ ಬಿಟ್ಟು ಸಂಪೂರ್ಣವಾಗಿ ಸಿನಿಮಾದಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದಾರೆ.


ಎಲ್ಲಿದ್ದೆ ಇಲ್ಲಿ ತನಕ ಸಿನಿಮಾವನ್ನು ನಿರ್ದೇಶಿಸಿದ್ದ ತೇಜಸ್ವಿ ಜತೆಗೆ ಮತ್ತೊಂದು ಸಿನಿಮಾ ಮಾಡಲು ಸೃಜನ್ ರೆಡಿಯಾಗಿದ್ದಾರೆ. ಈ ಸಿನಿಮಾವನ್ನೂ ತಮ್ಮ ಹೋಂ ಬ್ಯಾನರ್ ಲೋಕೇಶ್ ಪ್ರೊಡಕ್ಷನ್ ನಲ್ಲೇ ನಿರ್ಮಿಸಲು ನಿರ್ಧರಿಸಿದ್ದಾರಂತೆ.

ಈ ಬಗ್ಗೆ ಈಗಾಗಲೇ ನಿರ್ದೇಶಕರ ಜತೆ ಮಾತುಕತೆ ನಡೆಸಿದ್ದು, ಸದ್ಯದಲ್ಲೇ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಿದ್ದಾರೆ. ಅಂತೂ ತಡವಾಗಿಯಾದರೂ ಸೃಜನ್ ಸ್ಯಾಂಡಲ್ ವುಡ್ ನಲ್ಲಿ ಒಂದು ನೆಲೆ ಕಂಡುಕೊಳ್ಳುವ  ಹಂತದಲ್ಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಜತೆ ಹೃತಿಕ್ ರೋಷನ್ ರೊಮ್ಯಾನ್ಸ್?!