Publish Date: Fri, 11 Dec 2020 (09:48 IST)
Updated Date: Fri, 11 Dec 2020 (09:49 IST)
ಬೆಂಗಳೂರು: ರೋರಿಂಗ್ ಸ್ಟಾರ್ ಶ್ರೀ ಮುರಳಿ ಆಶಿಕಾ ರಂಗನಾಥ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ ಮದಗಜ ಚಿತ್ರತಂಡ ವಿಶಿಷ್ಟವಾಗಿ ತನ್ನ ಫಸ್ಟ್ ಲುಕ್ ರಿಲೀಸ್ ಡೇಟ್ ಘೋಷಣೆ ಮಾಡಿದೆ.
ಉಮಾಪತಿ ಗೌಡ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಮದಗಜ ಸಿನಿಮಾದ ಫಸ್ಟ್ ಲುಕ್ ಡಿಸೆಂಬರ್ 17 ರಂದು ಬೆಳಿಗ್ಗೆ 9.09 ಕ್ಕೆ ಆನಂದ್ ಅಡಿಯೋ ಯೂ ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಇದನ್ನು ನಿನ್ನೆ ಸಂಜೆ ಶ್ರೀಮುರಳಿ ವಿಶೇಷ ವಿಡಿಯೋ ಮೂಲಕ ಘೋಷಣೆ ಮಾಡಿದ್ದಾರೆ.