Select Your Language

Notifications

webdunia
webdunia
webdunia
webdunia

ಸ್ಪಂದನಾ ಉತ್ತರಕ್ರಿಯೆಯಲ್ಲಿ ಪಾಲ್ಗೊಂಡ ದೊಡ್ಮನೆ ಕುಟುಂಬ: ಕುಂಟುತ್ತಾ ಬಂದ ಶ್ರೀಮುರಳಿ

ಸ್ಪಂದನಾ ಉತ್ತರಕ್ರಿಯೆಯಲ್ಲಿ ಪಾಲ್ಗೊಂಡ ದೊಡ್ಮನೆ ಕುಟುಂಬ: ಕುಂಟುತ್ತಾ ಬಂದ ಶ್ರೀಮುರಳಿ
ಬೆಂಗಳೂರು , ಬುಧವಾರ, 16 ಆಗಸ್ಟ್ 2023 (16:32 IST)
ಬೆಂಗಳೂರು: ಇತ್ತೀಚೆಗೆ ತೀರಿಕೊಂಡ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ವಿಜಯ್ ರಾಘವೇಂದ್ರ ಉತ್ತರ ಕ್ರಿಯೆ, ಶಾಂತಿ ಹೋಮ ಕಾರ್ಯಕ್ರಮ ಇಂದು ನೆರವೇರಿದೆ.

ಮಲ್ಲೇಶ್ವರದಲ್ಲಿ ಬಿಕೆ ಶಿವರಾಂ ನಿವಾಸದಲ್ಲಿ ಉತ್ತರಾದಿಕ್ರಿಯೆಗಳು ನೆರವೇರಿದೆ. ಈ ಕಾರ್ಯಕ್ರಮದಲ್ಲಿ ವಿಜಯ್ ರಾಘವೇಂದ್ರ, ಸ್ಪಂದನಾ ಕುಟುಂಬಸ್ಥರು, ದೊಡ್ಮನೆ ಕುಟುಂಬಸ್ಥರಾದ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ಅಶ್ವಿನಿ ಪುನೀತ್ ರಾಜ್ ಕುಮಾರ್, ಸಂಗೀತ ನಿರ್ದೇಶಕ ಗುರುಕಿರಣ್ ಕುಟುಂಬ ಸೇರಿದಂತೆ ಆಪ್ತರು, ಅಭಿಮಾನಿಗಳು ಭಾಗಿಯಾಗಿದ್ದರು. ಸಾರ್ವಜನಿಕರಿಗಾಗಿ ಭೋಜನ ವ್ಯವಸ್ಥೆ ಮಾಡಲಾಗಿತ್ತು.

ಇನ್ನು, ಅತ್ತಿಗೆಯ ಶಾಂತಿ ಹೋಮ ಕಾರ್ಯಕ್ರಮಕ್ಕೆ ನಟ ಶ್ರೀಮುರಳಿ ಕಾಲು ನೋವಿನ ನಡುವೆಯೂ ವಾಕರ್ ನೆರವಿನಿಂದ ಬಂದಿದ್ದು ಎಲ್ಲರ ಗಮನ ಸೆಳೆಯಿತು. ಬಘೀರ ಶೂಟಿಂಗ್ ವೇಳೆ ಶ್ರೀಮುರಳಿಗೆ ಗಾಯವಾಗಿತ್ತು. ಇದಕ್ಕೆ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಬಳಿಕ ಸುಧಾರಿಸಿಕೊಂಡಿದ್ದ ಶ್ರೀಮುರಳಿ ಸ್ಪಂದನಾ ಅಂತಿಮ ಕ್ರಿಯೆ ವೇಳೆ ಆರಾಮವಾಗಿದ್ದರು. ಆದರೆ ಈಗ ಮತ್ತೆ ಕಾಲುನೋವಿನಿಂದ ಕುಂಟುತ್ತಾ ಬಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಜು ವೆಡ್ಸ್ ಗೀತಾ 2 ಚಿತ್ರಕ್ಕೆ ಚಾಲನೆ: ಗ್ರ್ಯಾಂಡ್ ಕಾರ್ ನಲ್ಲಿ ಎಂಟ್ರಿ ಕೊಟ್ಟ ರಚಿತಾ ರಾಂ