ಬೆಂಗಳೂರು: ಅಕಾಲಿಕವಾಗಿ ಸಾವನ್ನಪ್ಪಿದ್ದ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ವಿಜಯ್ ರಾಘವೇಂದ್ರ ಅವರ ಉತ್ತರಾದಿ ಕ್ರಿಯೆಗಳು ಇಂದು ನಡೆಯಲಿದೆ.
ಸ್ಪಂದನಾ ತಂದೆ ಬಿ.ಕೆ. ಶಿವರಾಂ ಅವರ ನಿವಾಸದಲ್ಲಿ ಇಂದು ಶಾಂತಿ ಹೋಮ ನಡೆಯುತ್ತಿದೆ. ಅದಾದ ಬಳಿಕ ಸಾರ್ವಜನಿಕರಿಗೆ ಭೋಜನ ವ್ಯವಸ್ಥೆ ಮಾಡಲಾಗಿದೆ.
ಸ್ನೇಹಿತರು, ಕುಟುಂಬಸ್ಥರ ಜೊತೆ ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದ್ದ ಸ್ಪಂದನಾ ಲೋ ಬಿಪಿ ಮತ್ತು ಹೃದಯಾಘಾತದಿಂದಾಗಿ ಆಗಸ್ಟ್ 5 ರಂದು ಸಾವನ್ನಪ್ಪಿದ್ದರು. ಇದಾದ ಬಳಿಕ ಪತಿ ವಿಜಯ್ ರಾಘವೇಂದ್ರ, ಪುತ್ರ ಶೌರ್ಯ ಸೇರಿದಂತೆ ಕುಟುಂಬಸ್ಥರು ಕಾವೇರಿ ನದಿಯಲ್ಲಿ ಸ್ಪಂದನಾ ಅಸ್ಥಿ ವಿಸರ್ಜಿಸಿದ್ದರು. ಇದೀಗ ಉತ್ತರ ಕ್ರಿಯೆ ನಡೆಯಲಿದೆ.