Select Your Language

Notifications

webdunia
webdunia
webdunia
Friday, 25 April 2025
webdunia

ರಿಯಲ್ ಸ್ಟಾರ್ ಉಪೇಂದ್ರರನ್ನು ಬ್ಯಾನ್ ಮಾಡಲು ಫಿಲಂ ಚೇಂಬರ್ ಗೆ ಮನವಿ

ಉಪೇಂದ್ರ
ಬೆಂಗಳೂರು , ಮಂಗಳವಾರ, 15 ಆಗಸ್ಟ್ 2023 (09:29 IST)
ಬೆಂಗಳೂರು: ದಲಿತ ಸಮುದಾಯಕ್ಕೆ ನೋವಾಗುವಂತಹ ಹೇಳಿಕೆ ನೀಡಿ ಸಂಕಷ್ಟಕ್ಕೀಡಾಗಿರುವ ರಿಯಲ್ ಸ್ಟಾರ್ ಉಪೇಂದ್ರರನ್ನು ಚಿತ್ರರಂಗದಿಂದ ಐದು ವರ್ಷ ಬ್ಯಾನ್ ಮಾಡುವಂತೆ ಫಿಲಂ ಚೇಂಬರ್ ಗೆ ಮನವಿ ಮಾಡಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದ ವಿಡಿಯೋ ಒಂದರಲ್ಲಿ ಉಪೇಂದ್ರ ಗಾದೆ ಮಾತೊಂದನ್ನು ಹೇಳಿದ್ದು, ಇದು ದಲಿತ ಸಮುದಾಯದವರ ಆಕ್ಷೇಪಕ್ಕೆ ಗುರಿಯಾಗಿತ್ತು. ಈ ಕಾರಣಕ್ಕೆ ಅವರ ವಿರುದ್ಧ ಹಲವು ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದ್ದವು. ಈ ನಡುವೆ ಹೈಕೋರ್ಟ್ ಮೆಟ್ಟಿಲೇರಿದ್ದ ಉಪೇಂದ್ರ ಎಫ್ ಐಆರ್ ಗೆ ತಡೆ ತಂದಿದ್ದರು.

ಇದೀಗ ಕರ್ನಾಟಕ ರಣಧೀರ ಪಡೆಯ ಕಾರ್ಯಕರ್ತರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಉಪೇಂದ್ರ ವಿರುದ್ಧ ದೂರು ನೀಡಿದ್ದಾರೆ. ಅಲ್ಲದೆ, ಜಾತಿ, ಸಮುದಾಯದ ಬಗ್ಗೆ ಮಾತನಾಡುವ ಇಂತಹ ನಟರನ್ನು ಐದು ವರ್ಷದವರೆಗೆ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾರ್ವೆಯಲ್ಲಿ ದಳಪತಿ ವಿಜಯ್ ಜೊತೆ ತ್ರಿಶಾ ಹಾಲಿಡೇ?!