Publish Date: Mon, 14 Aug 2023 (10:07 IST)
Updated Date: Mon, 14 Aug 2023 (10:09 IST)
ಬೆಂಗಳೂರು: ಸೋಷಿಯಲ್ ಮೀಡಿಯಾ ವಿಡಿಯೋ ಸಂದೇಶದಲ್ಲಿ ದಲಿತ ಸಮುದಾಯದ ಬಗ್ಗೆ ಆಕ್ಷೇಪಾರ್ಹ ಗಾದೆ ಬಳಸಿದ್ದಕ್ಕೆ ನಟ ಉಪೇಂದ್ರ ವಿರುದ್ಧ ದೂರು ದಾಖಲಾಗಿದೆ. ಇದೀಗ ಉಪೇಂದ್ರಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಉಪೇಂದ್ರ ವಿರುದ್ಧ ಮತ್ತಷ್ಟು ದೂರು ದಾಖಲಾಗಿದ್ದವು. ಇದೀಗ ಉಪೇಂದ್ರ ತಕ್ಷಣವೇ ವಿಚಾರಣೆಗೆ ಹಾಜರಾಗಲು ಕತ್ರಿಗುಪ್ಪೆ ಮತ್ತು ಸದಾಶಿವನಗರ ಪೊಲೀಸರು ನೋಟಿಸ್ ನೀಡಿದ್ದಾರೆ.
ಪ್ರಕರಣ ವಿವಾದಕ್ಕೀಡಾಗುತ್ತಿದ್ದಂತೇ ನಟ ಉಪೇಂದ್ರ ಸ್ಪಷ್ಟನೆ ನೀಡಿದ್ದಲ್ಲದೆ, ವಿಡಿಯೋ ಕೂಡಾ ಡಿಲೀಟ್ ಮಾಡಿದ್ದರು. ಆದರೆ ಕ್ಷಮೆ ಕೇಳಿದರೂ ಉಪೇಂದ್ರಗೆ ಸಂಕಷ್ಟ ತಪ್ಪಿಲ್ಲ.