Publish Date: Wed, 16 Aug 2023 (09:00 IST)
Updated Date: Wed, 16 Aug 2023 (09:22 IST)
ಬೆಂಗಳೂರು: ಶ್ರೀನಗರ ಕಿಟ್ಟಿ, ರಮ್ಯಾ ಕಾಂಬಿನೇಷನ್ ನಲ್ಲಿ ಮೂಡಿಬಂದಿದ್ದ ಸಂಜು ಮತ್ತು ವೆಡ್ಸ್ ಗೀತಾ ಸಿನಿಮಾ ಎವರ್ ಗ್ರೀನ್ ಹಿಟ್ ಆಗಿತ್ತು. ಇದೀಗ ಆ ಸಿನಿಮಾದ ಎರಡನೇ ಭಾಗ ನಿರ್ಮಾಣವಾಗುತ್ತಿದೆ.
ಈ ಬಾರಿ ರಮ್ಯಾ ಜಾಗಕ್ಕೆ ಹೀರೋಯಿನ್ ಆಗಿ ಡಿಂಪಲ್ ಕ್ವೀನ್ ರಚಿತಾ ರಾಂ ಬಂದಿದ್ದಾರೆ. ಈಗಾಗಲೇ ಚಿತ್ರತಂಡ ಫೋಟೋ ಶೂಟ್ ಕೂಡಾ ಮುಗಿಸಿತ್ತು. ಇದೀಗ ಚಿತ್ರದ ಟೈಟಲ್ ಲಾಂಚ್ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಿದ್ದು, ಚಿತ್ರಕ್ಕೆ ಚಾಲನೆ ನೀಡಿದೆ. ಸ್ಯಾಂಡಲ್ ವುಡ್ ನ ಸ್ಟಾರ್ ನಟಿ ರಚಿತಾ ರಾಂ ಐಷಾರಾಮಿ ಕಾರಿನಲ್ಲಿ ಎಂಟ್ರಿ ಕೊಟ್ಟು ಎಲ್ಲರ ಗಮನ ಸೆಳೆದರು.
ನಾಗಶೇಖರ್ ನಿರ್ದೇಶನದಲ್ಲಿ ಅದೇ ಹಳೆಯ ತಂಡದೊಂದಿಗೆ ಮತ್ತೆ ಎರಡನೇ ಭಾಗ ನಿರ್ಮಾಣವಾಗುತ್ತಿದೆ. ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಟೈಟಲ್ ಲಾಂಚ್ ಮಾಡಿಕೊಟ್ಟಿದ್ದಾರೆ. ಇಡೀ ಚಿತ್ರತಂಡ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು.