ನವದೆಹಲಿ: ಗೃಹ ಸಚಿವಾಲಯ ಈ ಸಾಲಿನ ಪದ್ಮ ಪ್ರಶಸ್ತಿ ಪ್ರಕಟ ಮಾಡಿದ್ದು, ಇತ್ತೀಚೆಗಷ್ಟೇ ದಿವಂಗತರಾದ ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಮಣ್ಯಂಗೆ ಮರಣೋತ್ತರವಾಗಿ ಪದ್ಮ ವಿಭೂಷಣ ಪ್ರಶಸ್ತಿ ನೀಡಲಾಗಿದೆ.
									
										
								
																	
ಎಸ್ ಪಿಬಿ ಅಲ್ಲದೆ, ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ ಸೇರಿದಂತೆ 7 ಮಂದಿ ಸಾಧಕರಿಗೆ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಒಟ್ಟಾರೆ 119 ಮಂದಿಗೆ ಪದ್ಮ ಪ್ರಶಸ್ತಿ ನೀಡಲಾಗುತ್ತಿದೆ. ಈ ಪೈಕಿ 10 ಮಂದಿಗೆ ಪದ್ಮ ಭೂಷಣ, 102 ಮಂದಿಗೆ ಪದ್ಮ ಶ್ರೀ ಪ್ರಶಸ್ತಿ ಗೌರವ ನೀಡಲಾಗುತ್ತಿದೆ. ಸಾಹಿತಿ ಚಂದ್ರಶೇಖರ ಕಂಬಾರ (ಪದ್ಮಭೂಷಣ), ಡಾ. ಬೆಳ್ಳೆ ಮೋನಪ್ಪ ಹೆಗ್ಡೆ (ಪದ್ಮ ವಿಭೂಷಣ), ಮಾತಾ ಬಿ. ಮಂಜಮ್ಮ ಜೋಗ್ತಿ (ಪದ್ಮಶ್ರೀ), ರಂಗಸಾಮಿ ಲಕ್ಷ್ಮೀನಾರಾಯಣ ಕಶ್ಯಪ್ (ಪದ್ಮಶ್ರೀ), ಕೆ.ವೈ ವೆಂಕಟೇಶ್ (ಪದ್ಮಶ್ರೀ) ಪದ್ಮ ಪ್ರಶಸ್ತಿಗೆ ಪಾತ್ರರಾದ ಕರ್ನಾಟಕದ ಸಾಧಕರು.