Publish Date: Wed, 05 Aug 2020 (17:11 IST)
Updated Date: Wed, 05 Aug 2020 (17:12 IST)
ಬೆಂಗಳೂರು: ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಕೊರೋನಾ ಸೋಂಕಿಗೊಳಗಾಗಿದ್ದಾರೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಂದೇಶವನ್ನೂ ನೀಡಿದ್ದಾರೆ.
ಯಾರೂ ನನ್ನ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ನಾನು ಆರಾಮವಾಗಿದ್ದೇನೆ. ಎರಡು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗುವೆ. ಯಾರೂ ನನಗೆ ಏನಾಯಿತೋ ಎಂದು ತಲೆಕೆಡಿಸಿಕೊಂಡು ಕರೆ ಮಾಡಿ ತೊಂದರೆ ತೆಗೆದುಕೊಳ್ಳುವುದು ಬೇಡ’ ಎಂದು ಎಸ್ ಪಿಬಿ ವಿಡಿಯೋದಲ್ಲಿ ಹೇಳಿದ್ದಾರೆ.
ಸದ್ಯಕ್ಕೆ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಎರಡು ದಿನಗಳಿಂದ ಸಣ್ಣ ಮಟ್ಟಿನ ಜ್ವರ ಮತ್ತು ಶೀತದ ಸಮಸ್ಯೆಯಿತ್ತು. ಪರೀಕ್ಷಿಸಿದಾಗ ಕೊರೋನಾ ಎಂದು ತಿಳಿದುಬಂದಿಲ್ಲ. ಆದರೆ ಸಣ್ಣ ಪ್ರಮಾಣದ ಲಕ್ಷಣಗಳಿರುವುದರಿಂದ ಗಾಬರಿಪಡುವಂತದ್ದು ಏನೂ ಇಲ್ಲ ಎಂದು ಎಸ್ ಪಿಬಿ ಹೇಳಿದ್ದಾರೆ.