Publish Date: Wed, 05 Aug 2020 (12:52 IST)
Updated Date: Wed, 05 Aug 2020 (12:54 IST)
ಬೆಂಗಳೂರು: ಕಿರುತೆರೆಯಲ್ಲಿ ಇತ್ತೀಚೆಗೆ ಜನಪ್ರಿಯ ಧಾರವಾಹಿಗಳೇ ಅರ್ಧಕ್ಕೇ ಪ್ರಸಾರ ನಿಲ್ಲಿಸಿ ಆ ಸ್ಥಾನದಲ್ಲಿ ಡಬ್ಬಿಂಗ್ ಧಾರವಾಹಿಗಳು ಪ್ರಸಾರವಾಗುತ್ತಿರುವುದು ಸಾಮಾನ್ಯವಾಗಿ ಹೋಗಿದೆ.
ಇದೀಗ ಕಲರ್ಸ್ ಕನ್ನಡ ವಾಹಿನಿ ತನ್ನ ಜನಪ್ರಿಯ ‘ಸೀತಾವಲ್ಲಭ’ ಧಾರವಾಹಿಯ ಪ್ರಸಾರ ನಿಲ್ಲಿಸಲು ಹೊರಟಿದೆ. ಸೀತಾ ವಲ್ಲಭ ಧಾರವಾಹಿ ಇನ್ನು ಕೆಲವೇ ಕಂತುಗಳಷ್ಟೇ ಪ್ರಸಾರವಾಗಲಿದೆ.
ಕಲರ್ಸ್ ವಾಹಿನಿಯಲ್ಲಿ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 8.30 ಕ್ಕೆ ಪ್ರಸಾರವಾಗುತ್ತಿದ್ದ ಧಾರವಾಹಿ ಈಗಾಗಲೇ 500 ಕ್ಕೂ ಹೆಚ್ಚು ಕಂತು ಪೂರೈಸಿದೆ. ಜನಪ್ರಿಯ ನಟ ಜಗನ್ ಈ ಧಾರವಾಹಿಯ ನಾಯಕರಾಗಿ ಅಭಿನಯಿಸುತ್ತಿದ್ದಾರೆ.