ಮುಂಬೈ: ಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಸುದ್ದಿಯಾಗುತ್ತಿರುವ ಬಾಲಿವುಡ್ ನಟ ಸೋನು ಸೂದ್ ಈಗ ಮತ್ತೆ ಅಂತಹದ್ದೇ ಕೆಲಸದ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಹುಟ್ಟಿನಿಂದ ಬೆನ್ನುಹುರಿ ಸಮಸ್ಯೆಗೊಳಗಾಗಿದ್ದ ಬಾಲಕಿ ಜಾಹ್ನವಿಗೆ ನಡೆದಾಡಲು ಕಷ್ಟವಾಗಿತ್ತು. ಹೀಗಾಗಿ ಆಕೆಯ ಶಸ್ತ್ರಚಿಕಿತ್ಸೆಗೆ ಕೆಲವು ತಿಂಗಳ ಹಿಂದೆ ನಟ ಸೋನು ಸೂದ್ ಹಣ ಸಹಾಯ ಮಾಡಿದ್ದರು.
ಇದೀಗ ಅದೇ ಬಾಲಕಿ ತನ್ನ ತಂದೆಯೊಂದಿಗೆ ನೇರವಾಗಿ ಸೋನು ಸೂದ್ ರನ್ನು ಭೇಟಿಯಾಗಿದ್ದಾರೆ. ತನ್ನಿಂದ ಸಹಾಯ ಪಡೆದ ಬಾಲಕಿ ಈಗ ನಡೆದಾಡುತ್ತಿರುವುದಕ್ಕೆ ಸೋನು ಸೂದ್ ಖುಷಿಯಾಗಿದ್ದಾರೆ. ಇದನ್ನು ಖುಷಿಯಿಂದಲೇ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.