Publish Date: Fri, 06 May 2022 (09:20 IST)
Updated Date: Fri, 06 May 2022 (09:34 IST)
ಬೆಂಗಳೂರು: ಹೆಡ್ ಬುಷ್ ಸಿನಿಮಾ ಬಗ್ಗೆ ಡಾನ್ ಜಯರಾಜ್ ಪುತ್ರ ಅಜಿತ್ ಜಯರಾಜ್ ಆಕ್ಷೇಪ ವ್ಯಕ್ತಪಡಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.
ಈ ವಿವಾದ ಸಿನಿಮಾ ಪ್ರಚಾರದ ಗಿಮಿಕ್ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಟಾಂಗ್ ಕೊಟ್ಟಿದ್ದರು. ಇದಕ್ಕೆ ನಿರ್ಮಾಪಕ, ನಟ ಧನಂಜಯ್ ಪ್ರತ್ಯುತ್ತರ ನೀಡಿದ್ದಾರೆ.
ನನ್ನ ಸಿನಿಮಾವನ್ನು ಗಿಮಿಕ್ ಮಾಡಿ ಪ್ರಚಾರ ಮಾಡುವ ಅವಶ್ಯಕತೆಯಿಲ್ಲ ಎಂದು ಧನಂಜಯ್ ತಿರುಗೇಟು ನೀಡಿದ್ದಾರೆ. ಇನ್ನು, ನಿರ್ದೇಶಕ, ಕತೆಗಾರ ಅಗ್ನಿಶ್ರೀಧರ್ ಕೂಡಾ ಜಯರಾಜ್ ಜೀವನದ ನಿಜವನ್ನೇ ಹೇಳಿದ್ದೇನೆ. ಇಲ್ಲದ್ದನ್ನು ಬರೆದಿಲ್ಲ ಎಂದಿದ್ದಾರೆ.