Webdunia - Bharat's app for daily news and videos

Install App

ಮದುವೆಯಾದ್ಮೇಲೆ ಯಾಕೆ ದಪ್ಪ ಆಗಿದ್ದೀರಿ ಮೇಡಂ ಎಂದಿದ್ದಕ್ಕೆ ಸೋನಲ್ ಮೊಂಥೆರೋ ಹೇಳಿದ್ದೇನು ನೋಡಿ

Krishnaveni K
ಶುಕ್ರವಾರ, 20 ಸೆಪ್ಟಂಬರ್ 2024 (14:24 IST)
Photo Credit: Instagram
ಬೆಂಗಳೂರು: ಕೆಲವೇ ದಿನಗಳ ಹಿಂದೆ ನಿರ್ದೇಶಕ ತರುಣ್ ಸುಧೀರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಸೋನಲ್ ಮೊಂಥೆರೋಗೆ ಪತ್ರಕರ್ತರೊಬ್ಬರು ಮದುವೆಯಾದ್ಮೇಲೆ ಯಾಕೆ ದಪ್ಪ ಆಗಿದ್ದೀರಿ ಮೇಡಂ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಅವರ ಉತ್ತರ ಏನಿತ್ತು ನೋಡಿ.

ಸೋನಲ್ ಮೊಂಥೆರೋ ಮದುವೆಯಾಗಿ ಒಂದು ತಿಂಗಳೇ ಕಳೆದಿದೆ. ಈಗ ತಮ್ಮ ಸಾಂಸಾರಿಕ ಜೀವನದಲ್ಲಿ ಮುಳುಗಿರುವ ಅವರು ಕೆಲವು ದಿನಗಳಿಗೆ ಸಿನಿಮಾಗಳಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಸೋನಲ್-ತರುಣ್ ಸದ್ಯದಲ್ಲೇ ಮಾಲ್ಡೀವ್ಸ್ ಗೆ ಹನಿಮೂನ್ ಗೆ ಹೋಗಲು ತಯಾರಿ ನಡೆಸುತ್ತಿದೆ.

ಈ ನಡುವೆ ಸೋನಲ್ ಮೊನ್ನೆ ಉದ್ಘಾಟನಾ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಾಧ್ಯಮಗಳು ಅವರನ್ನು ಮುತ್ತಿಕೊಂಡಿದೆ. ಈ ಪೈಕಿ ಒಬ್ಬರು ‘ಮೇಡಂ ಮದುವೆಯಾದ್ಮೇಲೆ ಯಾಕೆ ದಪ್ಪ ಆಗಿದ್ದೀರಿ’ ಎಂದು ತಮಾಷೆಯಾಗಿ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಸೋನಲ್, ‘ಸಾಕಷ್ಟು ಫಂಕ್ಷನ್ ಇತ್ತಲ್ಲ ಚೆನ್ನಾಗಿ ತಿಂದಿದ್ದೀನಿ. ಜಿಮ್ ಗೆ ಹೋಗಿಲ್ಲ. ಮತ್ತೆ ಮದುವೆಯಾದ್ಮೇಲೆ ಗಂಡ ಚೆನ್ನಾಗಿ ನೋಡಿಕೊಳ್ತಿದ್ದಾನೆ ಎಂದರೆ ದಪ್ಪ ಆಗ್ತಾರಂತೆ. ಸೋ.. ನಾನೂ ಹ್ಯಾಪಿ ಆಗಿದ್ದೀನಿ’ ಎಂದಿದ್ದಾರೆ.

ಇನ್ನು, ಮದುವೆಯಾದ ಬಳಿಕ ತಮ್ಮ ಸಿನಿಮಾ ಪ್ಲ್ಯಾನ್ ಬಗ್ಗೆಯೂ ಸೋನಲ್ ಮಾತನಾಡಿದ್ದಾರೆ. ನವಂಬರ್ ವರೆಗೂ ಸಿನಿಮಾಗಳಿಂದ ಬ್ರೇಕ್ ತಗೊಂಡಿದ್ದೇನೆ. ನವಂಬರ್ ಬಳಿಕ ಮತ್ತೆ ಸಿನಿಮಾ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದೇನೆ. ಒಂದು ರಿಲೀಸ್ ಗೆ ರೆಡಿಯಿದೆ, ಇನ್ನೆರಡು ಸಿನಿಮಾ ಶೂಟಿಂಗ್ ಆಗಬೇಕಿದೆ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸೈಮಾ 2025: ಕಿಚ್ಚ ಸುದೀಪ್ ಬೆಸ್ಟ್ ಆಕ್ಟರ್, ಪ್ರಶಸ್ತಿ ವಿಜೇತರ ಲಿಸ್ಟ್ ಇಲ್ಲಿದೆ

ನಟಿ ನಿರೂಪಕಿ ಅನುಶ್ರೀ ಎಷ್ಟೊಂದು ಸಿಂಪಲ್‌, ಮದುವೆ ಸೀರೆ ಬಗ್ಗೆ ಕೊಟ್ರು ಬಿಗ್‌ ಅಪ್ಡೇಟ್‌

Amrithadhare serial: ಅಮೃತಧಾರೆಯಲ್ಲಿ ಮಹಾ ತಿರುವು, ಕನ್ನಡದಲ್ಲಿ ಅಪರೂಪಕ್ಕೆ ನಡೆಯುತ್ತಿದೆ ಇಂಥಾ ಟ್ವಿಸ್ಟ್

ಖ್ಯಾತ ಕಿರುತೆರೆ ನಟ ಆಶಿಶ್ ಕಪೂರ್ ಮೇಲೆ ಇದೆಂಥಾ ಆರೋಪ, ಜೈಲು ಸೇರುವ ಪರಿಸ್ಥಿತಿ ಹಾಕೆ ಬಂತು

ಜಿಎಸ್ ಟಿ ದರ ಕಡಿತವಾದ್ರೂ ಕನ್ನಡ ಸಿನಿಮಾ ವೀಕ್ಷಕರಿಗೆ ಲಾಭವಿಲ್ಲ

ಮುಂದಿನ ಸುದ್ದಿ
Show comments