Publish Date: Tue, 08 Sep 2020 (12:18 IST)
Updated Date: Tue, 08 Sep 2020 (12:19 IST)
ಬೆಂಗಳೂರು: ಸ್ಯಾಂಡಲ್ ವುಡ್, ಕಿರುತೆರೆಯಲ್ಲಿ ಪೋಷಕ ಪಾತ್ರಧಾರಿಯಾಗಿ ಮಿಂಚಿದ್ದ ಹಿರಿಯ ನಟ ಸಿದ್ದರಾಜು ಕಲ್ಯಾಣ್ಕರ್ ವಿಧಿವಶರಾಗಿದ್ದಾರೆ.
ನಿನ್ನೆಯಷ್ಟೇ 60 ವರ್ಷದ ಹುಟ್ಟು ಹಬ್ಬ ಸಂಭ್ರಮಾಚರಿಸಿದ್ದ ಸಿದ್ಧರಾಜು ತಡರಾತ್ರಿ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ. ರಂಗಭೂಮಿ ಮೂಲಕ ಕಿರುತೆರೆ, ಹಿರಿತೆರೆಗೆ ಪದಾರ್ಪಣೆ ಮಾಡಿದ್ದ ಸಿದ್ಧರಾಜು ಇದುವರೆಗೆ ಅನೇಕ ಸಿನಿಮಾ, ಧಾರವಾಹಿಗಳಲ್ಲಿ ನಟಿಸಿದ್ದಾರೆ. ಅವರ ನಿಧನಕ್ಕೆ ಸ್ಯಾಂಡಲ್ ವುಡ್ ಕಲಾವಿದರು ಕಂಬನಿ ಮಿಡಿದಿದ್ದಾರೆ.