Publish Date: Sat, 28 Oct 2017 (16:56 IST)
Updated Date: Sat, 28 Oct 2017 (17:00 IST)
ಬೆಂಗಳೂರು: ಕೊನೆಗೂ ವಾರಂತ್ಯದಲ್ಲಿ ಮೊಟ್ಟೆ ಗೇಮ್ ಮುಗಿದಿದೆ. ಆದರೆ ಇದರಿಂದ ಶಿಕ್ಷೆ ಅನುಭವಿಸಿದ್ದು ಮಾತ್ರ ಕ್ಯಾಪ್ಟನ್ ಶೃತಿ.
ಬಿಗ್ ಬಾಸ್ ಮನೆಯಲ್ಲಿ ನಿನ್ನೆ ನಡೆದ ಟಾಸ್ಕ್ ನಲ್ಲಿ ಕಳಪೆ ಪ್ರದರ್ಶನ ತೋರಿದ ವ್ಯಕ್ತಿಯನ್ನು ಸೂಚಿಸಿ, ಕೊರಳಿಗೆ ಬೋರ್ಡ್ ಹಾಕುವಂತೆ ಬಿಗ್ ಬಾಸ್ ಸೂಚಿಸಿದ್ದರು. ಅದರಂತೆ ಕ್ಯಾಪ್ಟನ್ ಶೃತಿ ಕಳಪೆ ಪ್ರದರ್ಶನ ಬೋರ್ಡ್ ಸ್ಪರ್ಧಿ ದಿವಾಕರ್ ಗೆ ನೀಡಿದರು. ಆದರೆ ಇದರಿಂದ ಕುಪಿತಗೊಂಡ ದಿವಾಕರ್ ಬೋರ್ಡ್ ಹಾಕಿಕೊಳ್ಳಲು ನಿರಾಕರಿಸಿದರು.
ನಾನು ಉತ್ತಮವಾಗಿ ಆಟವಾಡಿದ್ದೇನೆ. ನನಗೆ ಕಳಪೆ ಬೋರ್ಡ್ ಯಾಕೆ? ನಾನು ಅನಕ್ಷರಸ್ಥ, ನೀವೆಲ್ಲಾ ಎಜುಕೇಟೆಡ್ಸ್. ಹೀಗಿರುವಾಗ ನಿಮಗೆ ತಿಳಿಯೋದಿಲ್ವಾ ಎಂದು ಶೃತಿಯನ್ನು ದಿವಾಕರ್ ತರಾಟೆಗೆ ತೆಗೆದುಕೊಂಡ್ರು.
ಹೀಗೆ ಶುರುವಾದ ಫಲಕದ ಗೊಂದಲ ರಾತ್ರಿಯಾದರೂ ಮುಗಿಯಲಿಲ್ಲ. ಕ್ಯಾಪ್ಟನ್ ನಿರ್ಧಾರ ಸರಿಯಾಗಿದೆ ಎಂದು ಕೆಲವರು ಸಮರ್ಥಿಸಿಕೊಂಡ್ರೆ, ಇನ್ನು ಕೆಲವರು ದಿವಾಕರ್ ಪರ ವಹಿಸಿದ್ರು. ಎಷ್ಟೇ ಒತ್ತಾಯ ಮಾಡಿದ್ರು ದಿವಾಕರ್ ಕಳಪೆ ಬೋರ್ಡ್ ಹಾಕಿಕೊಳ್ಳಲು ಸಮ್ಮತಿಸಲಿಲ್ಲ.
ಕಡೆಗೆ ಈ ಗೊಂದಲ ನಿವಾರಿಸಲು ಬಿಗ್‌ಬಾಸ್ ಎಂಟ್ರಿ ನೀಡಬೇಕಾಯಿತು. ಬೋರ್ಡ್ ಹಾಕಿಸಲು ವಿಫಲವಾದ ಕ್ಯಾಪ್ಟನ್ ಹಾಗೂ ಮೊಂಡುತನ ಪ್ರದರ್ಶಿಸಿದ ದಿವಾಕರ್ ನ್ನು ಬಿಗ್ ಬಾಸ್ ತಪ್ಪಿಸ್ಥರು ಎಂದರು. ಈ ವಾರ ಮನೆಯಿಂದ ಹೊರ ಹೋಗಲು ಇಬ್ಬರನ್ನೂ ನೇರವಾಗಿ ನಾಮಿನೇಟ್ ಮಾಡುವ ಮೂಲಕ ಬಿಗ್ ಬಾಸ್ ಶಿಕ್ಷೆ ನೀಡಿದ್ರು.