Select Your Language

Notifications

webdunia
webdunia
webdunia
webdunia

ಈ ವಾರ ಬಿಗ್ ಬಾಸ್ ಮನೆಯಿಂದ ಔಟ್ ಆಗೋರು ಯಾರು….?

biggboss kannada 5
ಬೆಂಗಳೂರು , ಮಂಗಳವಾರ, 17 ಅಕ್ಟೋಬರ್ 2017 (08:17 IST)
ಬೆಂಗಳೂರು: ಬಿಗ್ ಬಾಸ್ 5ಕ್ಕೆ ಈ ಸಲ ಬರ್ತಾರೆ ಇವರು ಬರ್ತಾರೆ ಅನ್ನೋ ಎಲ್ಲಾ ಅಂತೆ ಕಂತೆಗಳಿಗೆ ಬ್ರೇಕ್ ಬಿದ್ದಿದ್ದು, ಎಲ್ಲಾ 17 ಸ್ಪರ್ಧಿಗಳು ಸದ್ಯ ಬಿಗ್ ಬಾಸ್ ಮನೆ ಸೇರಿದ್ದಾರೆ. 9 ಸೆಲೆಬ್ರಿಟಿಗಳ ಜತೆ 6 ಮಂದಿ ಜನ ಸಾಮಾನ್ಯರಿರುವುದು ಈ ಬಾರಿಯ ವಿಶೇಷ.

6 ಮಂದಿ ಜನಸಾಮಾನ್ಯರು ಸಹ ತಮ್ಮದೇ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು, ಸದ್ಯ ಬಿಗ್ ಬಾಸ್ ಮನೆಯಲ್ಲಿ ಒಂದೆಡೆ ಸೇರಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರಿಟಿ ಸ್ಪರ್ಧಿಗಳ ಬಗ್ಗೆ ಎಲ್ಲರಿಗೂ ತಿಳಿದದ್ದೇ. ಆದರೆ ಉಳಿದಂತೆ 6 ಮಂದಿಯ ಬಗ್ಗೆ ಹೆಚ್ಚಾಗಿ ಏನು ತಿಳಿದಿಲ್ಲ. ಹೀಗಾಗಿ 2ನೇ ದಿನ ದೊಡ್ಮನೆಯಲ್ಲಿ ಎಲ್ಲಾ ಸ್ಪರ್ಧಿಗಳು ಅವರವರ ಬಗ್ಗೆ ತಿಳಿದುಕೊಳ್ಳಲು ಯತ್ನಿಸಿದರು.

ಸ್ಪರ್ಧಿಗಳ ವಸ್ತುಗಳೂ ಒಂದೊಂದಾಗಿ ದೊಡ್ಮನೆಗೆ ಬರ್ತಿದೆ. ಇದರ ನಡುವೆ ಬಾರ್ಬಿ ಡಾಲ್ ತನ್ನ ಶೂಸ್ ಕಳಿಸಿಲ್ಲಅಂತ ಕ್ಯಾಮೆರಾ ಮುಂದೆ ಕಣ್ಣೀರಿಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಟ್ರೋಲ್ ಆಗಿ ಸುದ್ದಿ ಮಾಡ್ತಿರೋದು ಸಹ ನಿವೇದಿತಾ ಗೌಡ.
webdunia

ಈ ಎಲ್ಲದರ ಮಧ್ಯೆ ಅಕ್ಕ ಖ್ಯಾತಿಯ ಅನುಪಮಾ ಗೌಡ ಎಲ್ಲಾ ಸ್ಪರ್ಧಿಗಳ ಒಮ್ಮತದಿಂದ ಮೊದಲ ವಾರದ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಇನ್ನು ಈ ವಾರದ ನಾಮಿನೇಶನ್ ಪ್ರಕ್ರಿಯೆ ಸಹ ಆಗಿದ್ದು, ಬಾರ್ಬಿ ಡಾಲ್ ನಿವೇದಿತಾ ಗೌಡ ಎಲಿಮಿನೇಟ್ ಆಗಿದ್ದಾರೆ. ಇದನ್ನ ಖುದ್ದು ಬಿಗ್‌ಬಾಸ್ ನಿರ್ದೇಶಕ ಪರಮೇಶ್ವರ್ ಗುಂಡ್ಕಲ್ ತಮ್ಮ ಫೇಸ್‌‌‌‌‌ಬುಕ್ ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಲಾಂಚ್ ಶೂಟಿಂಗ್ ಗಾಗಿ ಕಿಚ್ಚ ಸುದೀಪ್ ಎಷ್ಟೆಲ್ಲಾ ಕಷ್ಟಪಟ್ಟಿದ್ದರು ಗೊತ್ತಾ?