Publish Date: Wed, 18 Oct 2017 (16:08 IST)
Updated Date: Wed, 18 Oct 2017 (16:15 IST)
ಬೆಂಗಳೂರು: ಬಿಗ್‌ಬಾಸ್ ಮನೆಗೆ ಬಂದು ಎರಡು ದಿನಗಳು ಕಳೆದ್ರು ಸ್ಪರ್ಧಿ ಸಮೀರಾಚಾರ್ಯ ಊಟ ಮಾಡಿಲ್ಲ. ತಮಗೆ ಇದ್ದಿಲು, ಒಲೆ ಹಾಗೂ ಕುಕ್ಕರ್ ನೀಡುವಂತೆ ಬಿಗ್‌ಬಾಸ್ ಗೆ ಬೇಡಿಕೆಯಿಟ್ಟಿದ್ದರು.
ಆದರೆ ಸಮೀರಾಚಾರ್ಯರ ಬೇಡಿಕೆಗೆ ಬಿಗ್‌ಬಾಸ್ ಸ್ಪಂದಿಸಿರಲಿಲ್ಲ. ಎರಡನೇ ದಿನವಾದ ನಿನ್ನೆ ಸಹ ಸಮೀರಾಚಾರ್ಯ ತಮ್ಮ ಉಪವಾಸ ಮುಂದುವರೆಸಿದ್ದರು. ಕೊನೆಗೂ ಮಣಿದು ಮನಸ್ಸು ಬದಲಾಯಿಸಿದ ಬಿಗ್‌ಬಾಸ್, ಸಮೀರಾಚಾರ್ಯರಿಗೆ ತಾವು ಕೇಳಿದ ಪರಿಕರಗಳನ್ನು ನೀಡುವ ವಿಚಾರವನ್ನು ಬಿಗ್ ಬಾಸ್ ಮನೆಯ ಸದಸ್ಯರಿಗೆ ಬಿಟ್ಟರು.
ಬಿಗ್‌ಬಾಸ್ ಆದೇಶದಂತೆ ಎಲ್ಲ ಸದಸ್ಯರೂ ಸಮೀರಾಚಾರ್ಯರಿಗೆ ಅಗತ್ಯವಿರುವ ವಸ್ತುವನ್ನು ನೀಡುವಂತೆ ಒಪ್ಪಿಗೆ ಸೂಚಿಸಿದರು. ಈ ಮೂಲಕ ಬಿಗ್ ಬಾಸ್ ಸ್ಪರ್ಧಿಗಳು ತಮ್ಮ ಒಗ್ಗಟ್ಟು ಪ್ರದರ್ಶಿಸಿದರು. ಎಲ್ಲರ ಅಭಿಪ್ರಾಯಗಳನ್ನು ಕೇಳಿದ ಬಿಗ್‌ಬಾಸ್ ಸಮೀರಾಚಾರ್ಯರಿಗೆ ಕೇಳಿದ ವಸ್ತುಗಳನ್ನು ನೀಡಲು ಒಪ್ಪಿದ್ರು.
ಈ ವೇಳೆ ಎಲ್ಲರೂ ತಮ್ಮ ಪರವಾಗಿ ಬಿಗ್ ಬಾಸ್ ಗೆ ಮನವಿ ಮಾಡಿಕೊಂಡಿದ್ದಕ್ಕೆ ಸಮೀರಾಚಾರ್ಯ ಎಲ್ಲರಿಗೂ ಧನ್ಯವಾದ ತಿಳಿಸಿ ಭಾವುಕರಾದ್ರು.