Select Your Language

Notifications

webdunia
webdunia
webdunia
webdunia

ತೆಲುಗಿನಲ್ಲಿ ಹವಾ ಸೃಷ್ಟಿಸಿದ ಶೋಭಾ ಇಂದು ದೊಡ್ಮನೆಯಿಂದ ಹೊರಬರುತ್ತಾರಾ

Shobha Shetty, BigBoss Kannada Season 11, Kiccha Sudeep,

Sampriya

ಬೆಂಗಳೂರು , ಭಾನುವಾರ, 1 ಡಿಸೆಂಬರ್ 2024 (13:26 IST)
Photo Courtesy X
ಈ ವಾರ ಕಳಪೆ ಹಣೆಪಟ್ಟಿಯೊಂದಿಗೆ ಜೈಲು ಸೇರಿದ್ದ ಶೋಭಾ ಶೆಟ್ಟಿ ಇದೀಗ ಈ ವಾರ ಸೇಫ್ ಆದರೂ ಮನೆಯಿಂದ ಹೊರ ಹೋಗುವುದಾಗಿ ಕಣ್ಣೀರು ಹಾಕಿದ್ದಾರೆ.

ತೆಲುಗು ಬಿಗ್‌ಬಾಸ್‌ನಲ್ಲಿ ಆವೇಶದ ಆಟಕ್ಕೆಯೇ ಮನೆಮಾತಾಗಿದ್ದ ಶೋಭಾ ಶೆಟ್ಟಿಯ ನಡೆ ಕನ್ನಡ ಪ್ರೇಕ್ಷಕರಿಗೆ ಬಿಗ್ ಶಾಕ್ ನೀಡಿದೆ.  ನನಗೆ ಬಿಗ್ ಬಾಸ್ ಶೋ ಕಂಟಿನ್ಯೂ ಮಾಡೋಕೆ ಆಗಲ್ಲ ಎಂದು ಸುದೀಪ್ ಮುಂದೆ ನಟಿ ಕಣ್ಣೀರಿಟ್ಟಿದ್ದಾರೆ.

ಸೂಪರ್‌ ಸಂಡೇ ವಿತ್‌ ಬಾದ್‌ಷಾ ಸುದೀಪ್‌ ಎಪಿಸೋಡ್‌ನ ಪ್ರೋಮೋದಲ್ಲಿ ಶೋಭಾ ಅವರೇ ನೀವು ಸೇಫ್ ಎಂದು ಸುದೀಪ್ ಹೇಳಿದ್ದಾರೆ. ಆದರೆ ಇದಕ್ಕೆ ಅಳುತ್ತಲೇ ಶೋಭಾ ಶೆಟ್ಟಿ, ಸರ್ ನನಗೆ ಎಲ್ಲೋ ಒಂದು ಕಡೆ ಇಲ್ಲಿ ಇರೋಕೆ ಆಗುತ್ತಿಲ್ಲ ಅನಿಸುತ್ತಿದೆ. ಹೀಗೆ ಹೇಳುತ್ತಿದ್ದಂತೆ ಸ್ಪರ್ಧಿಗೆಲ್ಲಾ ಗಾಬರಿಯಿಂದ ಶೋಭಾರನ್ನು ನೋಡಿದ್ದಾರೆ. ಬಿಗ್ ಬಾಸ್‌ನಿಂದ ನನ್ನನ್ನು ಕಳುಹಿಸಿ ಎಂದು ಕೈ ಮುಗಿದು ಅಂಗಲಾಚಿರುವ ಶೋಭಾ ಕೇಳಿಕೊಂಡಿದ್ದಾರೆ.

ಅರ್ಥ ಮಾಡಿಕೊಳ್ಳಿ, ಯಾಕೆ ನೀವು ಒಳಗೆ ಹೋಗಿದ್ರಿ. ನಿಮ್ಮನ್ನು ಸೇಫ್ ಮಾಡಿದರಲ್ಲ ಜನ, ಅವರಿಗೆ ಈ ತರ ಉತ್ತರ ಕೊಡೋಕೆ ಆಗಲ್ಲ. ಹೊರಗಡೆ ಹೋಗಬೇಕಾ ಎಂದು ಕೈ ತೋರಿಸುತ್ತ ದೊಡ್ಡ ಧ್ವನಿಯಲ್ಲಿ ಕಿಚ್ಚ ಸುದೀಪ್ ಶೋಭಾಗೆ ಪ್ರಶ್ನಿಸಿದ್ದಾರೆ. ನಿಮಗಾಗಿ ಡೋರ್ ಓಪನ್ ಇದೆ ಎಂದು ಬಿಗ್‌ಬಾಸ್ ಮನೆಯ ಡೋರ್ ಓಪನ್ ಮಾಡಿದ್ದಾರೆ. ಪ್ರೋಮೋ ಪ್ರೇಕ್ಷಕರಲ್ಲಿ ಕುತೂಹಲ ಮತ್ತಷ್ಟು ಹೆಚ್ಚಿಸಿದೆ.

ಶೋಭಾಗೆ 'ಬಿಗ್ ಬಾಸ್' ಆಟ ಏನು ಹೊಸದಲ್ಲ. ತೆಲುಗಿನ 'ಬಿಗ್ ಬಾಸ್ 7'ರಲ್ಲಿ ಫಿನಾಲೆಗೆ ಒಂದು ದಿನಾವಿರುವಗ ಎಲಿಮಿನೇಟ್‌ ಆಗಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಪುಷ್ಪ 2 ರಿಲೀಸ್‌ಗೆ ದಿನಗಣನೆ: ಮುಂಗಡ ಬುಕ್ಕಿಂಗ್‌ನಲ್ಲಿ ಬಾಹುಬಲಿಯನ್ನು ಮೀರಿಸುತ್ತಾ ಅಲ್ಲು ಸಿನಿಮಾ