Select Your Language

Notifications

webdunia
webdunia
webdunia
webdunia

ಮನಸ್ಸು ಗೆದ್ದ ಹನುಮಂತಗೆ ಸ್ಪೆಷಲ್ ಗಿಫ್ಟ್‌ ಕಳುಹಿಸಿದ ಕಿಚ್ಚ ಸುದೀಪ್‌

Kiccha Sudeep, Singer Hanumantu, BigBoss Season11

Sampriya

ಬೆಂಗಳೂರು , ಶುಕ್ರವಾರ, 22 ನವೆಂಬರ್ 2024 (17:17 IST)
Photo Courtesy X
ಬಿಗ್‌ಬಾಸ್‌ ಮನೆಗೆ ಮೊದಲ ವೈಲ್ಡ್‌ ಕಾರ್ಡ್‌ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಗಾಯಕ ಹನುಮಂತು ತನ್ನ ಮುಗ್ಧತೆ ಹಾಗೂ ನೇರಾ ಮಾತಿನಿಂದ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಇನ್ನೂ ಕಿಚ್ಚ ಸುದೀಪ್ ಅವರಿಗೂ ಕೂಡಾ ಹನುಮಂತು ಆಟದ ವೈಖರಿ ಹಾಗೂ ನೇರಾ ಮಾತು ತುಂಬಾನೇ ಇಷ್ಟವಾಗಿದೆ. ಇದೀಗ ಕಿಚ್ಚ ಸುದೀಪ್ ಅವರು ಹನುಮಂತುಗೆ ನೀಡಿದ ಮಾತಿನಂತೆ ಗಿಫ್ಟ್‌ ಅನ್ನು ಕಳುಹಿಸಿಕೊಟ್ಟಿದ್ದಾರೆ.  

ಕಳೆದ ವಾರಾಂತ್ಯದಲ್ಲಿ ಸುದೀಪ್ ಅವರು ಹನುಮಂತಗೆ ಪ್ರತಿದಿನ ನೀವ್ಯಾಕೆ ಸ್ನಾನ ಮಾಡುವುದಿಲ್ಲ ಎಂದು ಪ್ರಶ್ನಿಸಿದ್ದರು. ಆಗ ನನ್ನ ಬಳಿ 4ರಿಂದ 5 ಬಟ್ಟೆಗಳಿವೆ. ಪ್ರತಿದಿನ ಸ್ನಾನ ಮಾಡಿದ್ರೆ ಪದೇ ಪದೇ ಬಟ್ಟೆ ಒಗೆಯಬೇಕು ಎಂದು ಹನುಮಂತ ಉತ್ತರಿಸಿದರು. ಅವರ ಮಾತು ಕೇಳಿದ ಸುದೀಪ್, ನಿಮ್ಮ ಬಟ್ಟೆಯ ಅಳತೆ ನಮಗೆ ಕೊಡಿ. ನಮ್ಮ ಡಿಸೈನರ್‌ಗೆ ಹೇಳಿ ನಿಮಗೆ ಬಟ್ಟೆ ಕಳುಹಿಸುತ್ತೇನೆ ಎಂದು ಸುದೀಪ್ ಹೇಳಿದ್ದರು.

ಇದೀಗ ಕೊಟ್ಟ ಮಾತಿನಂತೆ ಸುದೀಪ್ ಅವರು ಪತ್ರದೊಂದಿಗೆ ಬಟ್ಟೆಗಳನ್ನು ಕಳುಹಿಸಿಕೊಟ್ಟಿದ್ದಾರೆ. ಕಿಚ್ಚನ ನಡೆಗೆ ಅಭಿಮಾನಿಗಳಿಂದ ಶ್ಲಾಘನೆ ವ್ಯಕ್ತವಾಗಿದೆ. ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಕೂಡ ಖುಷಿಪಟ್ಟಿದ್ದಾರೆ.

ಇಂದು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ಗಿಫ್ಟ್ ನೋಡಿದ ಹನುಮಂತು ತುಂಬಾನೇ ಭಾವುಕರಾಗಿದ್ದಾರೆ. ಅವರು ಕೊಟ್ಟಿರುವ ಉಡುಗೊರೆ ನೋಡಿದ್ರೆ,  ನನಗೆ ನಂಬೋಕೆ ಆಗುತ್ತಿಲ್ಲ. ಅಷ್ಟೊಂದು ಖುಷಿಯಾಗುತ್ತಿದೆ. ಧನ್ಯವಾದಗಳು ಸರ್ ಎಂದಿದ್ದಾರೆ.

ಇನ್ನೂ ಹೊಸ ಬಟ್ಟೆಗಳ ಜತೆಗೆ ಹನುಮಂತುಗೆ ಚಡ್ಡಿಯನ್ನು ಕಳುಹಿಸಿಕೊಟ್ಟಿದ್ದಾರೆ. ಇದನ್ನು ನೋಡಿ ಮಾವೋ 3 ಸಾವಿರದ ಚಡ್ಡಿ ಎಂದು ಹನುಮಂತ ನಕ್ಕಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟ ಮೊದಲ ವಾರವೇ ರಜತ್‌ಗೆ ಕಳಪೆ ಪಟ್ಟ