ಬೆಂಗಳೂರು: ಶಿವರಾಜ್ ಕುಮಾರ್ ನಾಯಕರಾಗಿರುವ ಘೋಸ್ಟ್ ಸಿನಿಮಾ ಇಂದು ಬಿಡುಗಡೆಯಾಗಿದ್ದು ಫಸ್ಟ್ ಡೇ ಫಸ್ಟ್ ಶೋ ನೋಡಲು ಶಿವಣ್ಣ ಅಭಿಮಾನಿಗಳು ನೂಕುನುಗ್ಗಲು ನಡೆಸಿದ್ದಾರೆ. 
									
			
			 
 			
 
 			
			                     
							
							
			        							
								
																	ತಮಿಳಿನ ಲಿಯೋ ಸಿನಿಮಾದ ಮುಂದೆಯೂ ಘೋಸ್ಟ್ ಉತ್ತಮ ಓಪನಿಂಗ್ ಪಡೆದಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಆಕ್ಷನ್ ಗೆ ಫಿದಾ ಆಗಿದ್ದಾರೆ.
									
										
								
																	ಘೋಸ್ಟ್ ಮೊದಲಾರ್ಧದಲ್ಲಿ ಮೈನವಿರೇಳಿಸುವ ಆಕ್ಷನ್ ದೃಶ್ಯಗಳಿವೆ. ದ್ವಿತಿಯಾರ್ಧದಲ್ಲಿ ಮಾಸ್ ಅಂಶಗಳ ಜೊತೆಗೆ ಕುತೂಹಲಕಾರಿ ಟ್ವಿಸ್ಟ್ ಗಳೂ ಇವೆ. ಶಿವಣ್ಣನ ಎಂಟ್ರಿಯೇ ಅದ್ಭುತವಾಗಿದ್ದು, ವಿವಿಧ ಗೆಟಪ್ ಗಳು ಇನ್ನಷ್ಟು ಕುತೂಹಲಕಾರಿಯಾಗಿದೆ ಎಂದು ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಾರೆ.