Publish Date: Fri, 24 Apr 2020 (10:24 IST)
Updated Date: Fri, 24 Apr 2020 (10:26 IST)
ಬೆಂಗಳೂರು: ವರನಟ ಡಾ. ರಾಜ್ ಕುಮಾರ್ ಜನ್ಮದಿನದಂದು ಸಾಮಾನ್ಯವಾಗಿ ಅಭಿಮಾನಿಗಳು ಅವರ ಸಮಾಧಿ ಮುಂದೆ ನೆರೆದಿರುತ್ತಾರೆ. ಆದರೆ ಈ ಬಾರಿ ಲಾಕ್ ಡೌನ್ ನಿಂದಾಗಿ ಸಾಧ‍್ಯವಾಗುತ್ತಿಲ್ಲ.
ಆದರೆ ಹಿರಿಯ ಪುತ್ರ ಶಿವರಾಜ್ ಕುಮಾರ್ ಬೆಳ್ಳಂ ಬೆಳಿಗ್ಗೆಯೇ ಅಪ್ಪಾಜಿ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಮಾಸ್ಕ್, ಗ್ಲೌಸ್ ಹಾಕಿಕೊಂಡು ಸಮಾಧಿಗೆ ಬಂದ ಶಿವರಾಜ್ ಕುಮಾರ್ ಪೂಜೆ ಸಲ್ಲಿಸಿ ತೆರಳಿದ್ದಾರೆ. ಮೊನ್ನೆ ತಾನೇ ಡಾ.ರಾಜ್ ಪುಣ್ಯತಿಥಿಯಂದೂ ಶಿವಣ್ಣ ಮಾತ್ರ ಸಮಾಧಿಗೆ ಬಳಿ ಆಗಮಿಸಿ ಪೂಜೆ ಸಲ್ಲಿಸಿದ್ದರು.
ಇನ್ನು, ಶಿವರಾಜ್ ಕುಮಾರ್ ಹೊಸ ಸಿನಿಮಾ ಇಂದು ಘೋಷಣೆಯಾಗಲಿದೆ. ಈ ಚಿತ್ರಕ್ಕೆ ರಾಮ್ ಧುಲಿಪುಡಿ ಆಕ್ಷನ್ ಕಟ್ ಹೇಳಲಿದ್ದಾರೆ. ಸೆಪ್ಟೆಂಬರ್ ನಲ್ಲಿ ಚಿತ್ರೀಕರಣ ಆರಂಭವಾಗುವ ನಿರೀಕ್ಷೆಯಿದೆ.