Publish Date: Fri, 24 Apr 2020 (09:29 IST)
Updated Date: Fri, 24 Apr 2020 (09:30 IST)
ಬೆಂಗಳೂರು: ಇಂದು ವರನಟ ಡಾ.ರಾಜ್ ಕುಮಾರ್ ಜನ್ಮದಿನವಾಗಿದ್ದು, ಈ ಬಾರಿ ನೇರವಾಗಿ ಅಭಿಮಾನಿಗಳೊಂದಿಗೆ ಬರ್ತ್ ಡೇ ಆಚರಿಸಿಕೊಳ್ಳಲು ಸಾಧ‍್ಯವಾಗದೇ ಇರುವುದಕ್ಕೆ ರಾಜ್ ಪುತ್ರರಾದ ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳ ಜತೆ ಕಾಲ ಕಳೆಯಲಿದ್ದಾರೆ.
ಪ್ರತೀ ವರ್ಷವೂ ಡಾ.ರಾಜ್ ಬರ್ತ್ ಡೇಗೆ ಅಭಿಮಾನಿಗಳು ಸಮಾಧಿಗೆ ಪೂಜೆ ಮಾಡಿ ಅನ್ನದಾಸೋಹ, ರಕ್ತದಾನ ಮುಂತಾದ ಸಮಾಜ ಮುಖೀ ಕೆಲಸ ಮಾಡುತ್ತಿದ್ದರು. ಆದರೆ ಲಾಕ್ ಡೌನ್ ನಿಂದಾಗಿ ಈ ವರ್ಷ ಅದು ಸಾಧ‍್ಯವಾಗುತ್ತಿಲ್ಲ.
ಅದರ ಬದಲು ಅಭಿಮಾನಿಗಳ ಮೊಗದಲ್ಲಿ ಸಂತಸ ತರಲು ಪುನೀತ್ ರಾಜ್ ಕುಮಾರ್ ಇಂದು ಮಧ್ಯಾಹ್ನ 12 ಗಂಟೆಗೆ ಇನ್ ಸ್ಟಾಗ್ರಾಂನಲ್ಲಿ ಲೈವ್ ಬರಲಿದ್ದಾರೆ. ಇನ್ನು, ಶಿವರಾಜ್ ಕುಮಾರ್ ಇಂದು ಮಧ‍್ಯಾಹ್ನ 11.30 ರಿಂದ ಶ್ರೀ ಶ್ರೀ ರವಿಶಂಕರ್ ಗುರೂಜಿ ಜತೆಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬರಲಿದ್ದು, ಅಭಿಮಾನಿಗಳ ಜತೆ ಮಾತನಾಡಲಿದ್ದಾರೆ.