Publish Date: Fri, 24 Apr 2020 (09:26 IST)
Updated Date: Fri, 24 Apr 2020 (09:27 IST)
ಬೆಂಗಳೂರು: ವರನಟ, ಡಾ. ರಾಜ್ ಕುಮಾರ್ ಜನ್ಮ ದಿನವಾದ ಇಂದು ಅಣ್ಣಾವ್ಯ ಮೊಮ್ಮಗ ಯುವರಾಜ್ ಕುಮಾರ್ ಮೊದಲ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಲಿದೆ.
ಇಂದು ಅಣ್ಣಾವ್ರ 91 ನೇ ಜನ್ಮ ದಿನವಾಗಿದೆ. ಆದರೆ ಈ ಬಾರಿ ಪ್ರತೀ ಬಾರಿಯಂತೆ ಭರ್ಜರಿಯಾಗಿ ಹುಟ್ಟುಹಬ್ಬ ಆಚರಣೆಗೆ ಲಾಕ್ ಡೌನ್ ಅಡ್ಡಿಯಾಗಿದೆ. ಮೊನ್ನೆಯಷ್ಟೇ ಅವರ ಪುಣ್ಯತಿಥಿಯಂದೂ ಅಭಿಮಾನಿಗಳಿಗೆ ರಾಜ್ ಸ್ಮರಣೆ ಕಾರ್ಯಕ್ರಮ ನಡೆಯಲು ಸಾಧ‍್ಯವಾಗಿರಲಿಲ್ಲ.
ಇಂದು ರಾಘವೇಂದ್ರ ರಾಜ್ ಕುಮಾರ್ ಪುತ್ರ, ಡಾ.ರಾಜ್ ಮೊಮ್ಮಗ ಯುವರಾಜ ಕುಮಾರ್ ಇದೇ ಮೊದಲ ಬಾರಿಗೆ ಅಭಿನಯಿಸುತ್ತಿರುವ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗುತ್ತಿದೆ. ಇಂದು 4 ಗಂಟೆಗೆ ಫಸ್ಟ್ ಲುಕ್ ಬಿಡುಗಡೆ ಮಾಡುವುದಾಗಿ ರಾಘವೇಂದ್ರ ರಾಜ್ ಕುಮಾರ್ ಹೇಳಿದ್ದಾರೆ.