Publish Date: Thu, 23 Apr 2020 (09:40 IST)
Updated Date: Thu, 23 Apr 2020 (09:42 IST)
ಬೆಂಗಳೂರು: ದಕ್ಷಿಣ ಭಾರತದ ಖ್ಯಾತ ಗಾಯಕಿ ಎಸ್. ಜಾನಕಿ ಇಂದು 83 ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಹಳೆಯ ಗೀತೆಗಳಿಗೆ ಖಾಯಂ ಧ್ವನಿಯಾಗಿದ್ದ ಜಾನಕಿಗೆ ಅಭಿಮಾನಿಗಳು ಹುಟ್ಟುಹಬ್ಬದ ಶುಭಾಷಯ ಕೋರಿದ್ದಾರೆ.
ಕನ್ನಡ, ಮಲಯಾಳ, ತೆಲುಗು, ತಮಿಳು ಮತ್ತು ಹಿಂದಿ ಭಾಷೆ ಸೇರಿದಂತೆ ಅನೇಕ ಭಾಷೆಗಳಲ್ಲಿ ಸಾವಿರಾರು ಹಾಡು ಹಾಡಿರುವ ಎಸ್ ಜಾನಕಿ 1938 ರಲ್ಲಿ ಆಂಧ್ರಪ್ರದೇಶದಲ್ಲಿ ಜನಿಸಿದ್ದರು.
ಮೂಲತಃ ಆಂಧ್ರದವರಾದರೂ ಅನೇಕ ಕನ್ನಡ ಹಾಡುಗಳನ್ನು ಹಾಡಿದ್ದರಿಂದ ಕನ್ನಡಿತಿಯೇ ಆಗಿದ್ದರು. ಇದೀಗ ಜಾನಕಿ ಹಾಡುವುದರಿಂದ ನಿವೃತ್ತಿ ಪಡೆದಿದ್ದಾರೆ. ಆದರೆ ಇಂದಿಗೂ ಅವರ ಹಾಡುಗಳು ಕೇಳುಗರಿಗೆ ಅಚ್ಚುಮೆಚ್ಚಿನದ್ದಾಗಿದೆ.