ಬೆಂಗಳೂರು: ಥಿಯೇಟರ್ ನಲ್ಲಿ ಹೌಸ್ ಫುಲ್ ಪ್ರದರ್ಶನಕ್ಕೆ ಅವಕಾಶ ನೀಡಿದ ಬೆನ್ನಲ್ಲೇ ಒಂದೇ ದಿನ ಎರಡೆರಡು ಸಿನಿಮಾ ಬಿಡುಗಡೆಯಾಗುತ್ತಿರುವ ಬಗ್ಗೆ ನಟ ಶಿವರಾಜ್ ಕುಮಾರ್ ಕಿವಿ ಮಾತು ಹೇಳಿದ್ದಾರೆ.
ಎರಡು ಬಿಗ್ ಸಿನಿಮಾಗಳು ಒಂದೇ ದಿನ ಬಿಡುಗಡೆಯಾದರೆ ಗಳಿಕೆಗೆ ಹೊಡೆತ ಬೀಳಲಿದೆ. ಇದು ಸ್ಟಾರ್ ವಾರ್ ಗೂ ಕಾರಣವಾಗಬಹುದು. ಈ ಹಿನ್ನಲೆಯಲ್ಲಿ ಶಿವಣ್ಣ ಮಾತನಾಡಿದ್ದಾರೆ.
ಎಲ್ಲಾ ನಿರ್ಮಾಪಕರಿಗೂ ತಮ್ಮ ಹಣ ವಾಪಸ್ ಬರಬೇಕೆಂಬ ಆಸೆ ಇರುತ್ತದೆ. ಇಲ್ಲಿ ಎಲ್ಲರೂ ನಮ್ಮವರೇ. ಯಾರಿಗೂ ತೊಂದರೆಯಾಗದಂತೆ ನಿರ್ಮಾಪಕರು ಪರಸ್ಪರ ಮಾತನಾಡಿ ಸಿನಿಮಾ ಬಿಡುಗಡೆ ಮಾಡಿದರೆ ಒಳ್ಳೆಯದು. ಇಲ್ಲಿ ಎಲ್ಲರೂ ನಮ್ಮವರೇ. ಹೊಂದಾಣಿಕೆಯಿರಲಿ ಎಂದು ಶಿವಣ್ಣ ಕಿವಿ ಮಾತು ಹೇಳಿದ್ದಾರೆ.