Select Your Language

Notifications

webdunia
webdunia
webdunia
webdunia

‘100’ ಸಿನಿಮಾ ರಿಲೀಸ್ ಬಗ್ಗೆ ಸುಳಿವು ನೀಡಿದ ರಮೇಶ್ ಅರವಿಂದ್

‘100’ ಸಿನಿಮಾ ರಿಲೀಸ್ ಬಗ್ಗೆ ಸುಳಿವು ನೀಡಿದ ರಮೇಶ್ ಅರವಿಂದ್
ಬೆಂಗಳೂರು , ಮಂಗಳವಾರ, 28 ಸೆಪ್ಟಂಬರ್ 2021 (09:05 IST)
ಬೆಂಗಳೂರು: ಥಿಯೇಟರ್ ನಲ್ಲಿ ಹೌಸ್ ಫುಲ್ ಪ್ರದರ್ಶನಕ್ಕೆ ಒಪ್ಪಿಗೆ ಸಿಗುತ್ತಿದ್ದಂತೇ ಸ್ಯಾಂಡಲ್ ವುಡ್ ನಲ್ಲಿ ಸಿನಿಮಾ ರಿಲೀಸ್ ನ ಪ್ರವಾಹವೇ ಆರಂಭವಾಗಿದೆ.


ಈಗಾಗಲೇ ಕೋಟಿಗೊಬ್ಬ 3, ಸಲಗ, ಭಜರಂಗಿ 2, ನಿನ್ನ ಸನಿಹಕೆ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಅದಲ್ಲದೆ, ಮತ್ತಷ್ಟು ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿ ನಿಂತಿದೆ. ಆ ಪೈಕಿ ರಮೇಶ್ ಅರವಿಂದ್ ಅಭಿನಯದ ‘100’ ಸಿನಿಮಾವೂ ಒಂದು.

ಸೈಬರ್ ಕ್ರೈಂ ಆಧಾರಿತ 100 ಸಿನಿಮಾ ಸದ್ಯದಲ್ಲೇ ರಿಲೀಸ್ ಡೇಟ್ ಅನೌನ್ಸ್ ಆಗುವ ಬಗ್ಗೆ ರಮೇಶ‍್ ಅರವಿಂದ್ ಸುಳಿವು ನೀಡಿದ್ದಾರೆ. ರಮೇಶ್ ಅರವಿಂದ್ ನಿರ್ದೇಶಿಸಿ, ನಟಿಸಿರುವ ಈ ಸಿನಿಮಾ ನವಂಬರ್ ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಸಿನಿಮಾದಲ್ಲಿ ರಚಿತಾ ರಾಂ ಕೂಡಾ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕುತೂಹಲ ಕೆರಳಿಸಿದ ಪುನೀತ್, ಸಂತೋಷ್ ಆನಂದ್ ರಾಮ್, ಜಗ್ಗೇಶ್ ಭೇಟಿ