Select Your Language

Notifications

webdunia
webdunia
webdunia
webdunia

ಕುತೂಹಲ ಕೆರಳಿಸಿದ ಪುನೀತ್, ಸಂತೋಷ್ ಆನಂದ್ ರಾಮ್, ಜಗ್ಗೇಶ್ ಭೇಟಿ

ಕುತೂಹಲ ಕೆರಳಿಸಿದ ಪುನೀತ್, ಸಂತೋಷ್ ಆನಂದ್ ರಾಮ್, ಜಗ್ಗೇಶ್ ಭೇಟಿ
ಬೆಂಗಳೂರು , ಸೋಮವಾರ, 27 ಸೆಪ್ಟಂಬರ್ 2021 (17:07 IST)
ಬೆಂಗಳೂರು: ನವರಸನಾಯಕ ಜಗ್ಗೇಶ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಸಂತೋಷ್ ಆನಂದ್ ರಾಮ್ ಪರಸ್ಪರ ಭೇಟಿಯಾಗಿರುವುದು ಸಿನಿ ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗಿದೆ.

Photo Courtesy: Twitter

ಸಂತೋಷ್ ಆನಂದ್ ರಾಮ್ ಮತ್ತು ಪುನೀತ್ ಯುವರತ್ನ ಮುಗಿಸಿ ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಮತ್ತೊಂದು ಹೊಸ ಪ್ರಾಜೆಕ್ಟ್ ನ್ನು ಮುಂದಿನ ವರ್ಷ ಆರಂಭಿಸುತ್ತಿದ್ದಾರೆ. ಜಗ್ಗೇಶ್ ಜೊತೆಗೆ ಇತ್ತೀಚೆಗೆ ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಹೊಂಬಾಳೆ ಫಿಲಂಸ್ ‘ರಾಘವೇಂದ್ರ ಸ್ಟೋರ್ಸ್’ ಎಂಬ ಸಿನಿಮಾ ಮಾಡುತ್ತಿರುವ ಸುದ್ದಿ ಪ್ರಕಟಿಸಿತ್ತು.

ಇದೇ ವಿಚಾರವಾಗಿ ಈ ಮೂವರು ದಿಗ್ಗಜರು ಭೇಟಿಯಾಗಿದ್ದಾರಾ ಎಂಬ ಕುತೂಹಲ ಅಭಿಮಾನಿಗಳದ್ದು. ಇನ್ನು, ತಮ್ಮ ಭೇಟಿ ಸೌಹಾರ್ದಯುತವಾಗಿತ್ತು ಎಂದ ಜಗ್ಗೇಶ್, ಬಹಳ ದಿನಗಳ ನಂತರ ಯುವಮಿತ್ರರು ಆಕಸ್ಮಿಕವಾಗಿ ಸಿಕ್ಕು ಮನಬಿಚ್ಚಿ ಮಾತಾಡಿ ನಕ್ಕು ಸಹಭೋಜನ ಮಾಡಿ ಪರಸ್ಪರ ಶುಭ ಹಾರೈಸಿದ ಕ್ಷಣ ಎಂದಿದ್ದಾರೆ. ಹೀಗಾಗಿ ಇದೊಂದು ಸೌಹಾರ್ದಯುತ ಭೇಟಿಯಾಗಿತ್ತಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಾಲು ಸಾಲು ಚಿತ್ರ ಬಿಡುಗಡೆಗೆ ಬೇಕು ನಿರ್ಮಾಪಕರ ಪ್ಲ್ಯಾನ್