ತೊಟ್ಟಿದ್ದ ಜಾಕೆಟ್ ನ್ನೇ ತೆಗೆದು ಆಂಕರ್ ಅನುಶ್ರೀಗೆ ಗಿಫ್ಟ್ ಆಗಿ ನೀಡಿದ ಶಿವಣ್ಣ

Webdunia
ಮಂಗಳವಾರ, 28 ಜೂನ್ 2022 (09:30 IST)
ಬೆಂಗಳೂರು: ಶಿವರಾಜ್ ಕುಮಾರ್ ತಮ್ಮನ್ನು ಪ್ರೀತಿಸುವವರಿಗೆ ಎಂದೂ ನಿರಾಸೆ ಮಾಡಲ್ಲ. ಎಷ್ಟಾದರೂ ದೊಡ್ಮನೆ ಮಗ. ಹೀಗಾಗಿ ಆ ಗುಣ ಅವರಲ್ಲಿ ಸಹಜವಾಗಿಯೇ ಇದೆ.

ಇದೀಗ ಜೀ ಕನ್ನಡದಲ್ಲಿ ಪ್ರಸಾರವಾಗುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ತಾವು ತೊಟ್ಟಿದ್ದ ಜಾಕೆಟ್ ನ್ನೇ ಆಂಕರ್ ಅನುಶ್ರೀಗೆ ಗಿಫ್ಟ್ ಆಗಿ ಕೊಟ್ಟಿದ್ದಾರೆ ಶಿವಣ್ಣ.

ಈ ಬಗ್ಗೆ ಅನುಶ್ರೀ ಹೇಳಿಕೊಂಡಿದ್ದು, ‘ನಿಮ್ಮ ಜಾಕೆಟ್ ಚೆನ್ನಾಗಿದೆ ಅಣ್ಣ ಎಂದಷ್ಟೇ ಹೇಳಿದ್ದು, ಅಷ್ಟಕ್ಕೇ ಆಯ್ತು ಬಿಡಮ್ಮ ನಿಂಗೆ ಕೊಡ್ತೀನಿ ಎಂದ್ರು. ನಾನು ಸುಮ್ನೇ ಹೇಳಿದ್ದಾರೆ ಅಂದ್ಕೊಂಡೆ. ಆದರೆ ಎಷ್ಟಾದ್ರೂ ಅಣ್ಣಾವ್ರ ರಕ್ತ ಅಲ್ವಾ? ಆಕಾಶ ನೋಡದ  ಕೈ ಪ್ರೀತಿ ಹಂಚಿದ ಕೈಗಳು. ಹೊರಡುವ ಮುನ್ನ ಜಾಕೆಟ್ ಬಿಚ್ಚಿ ಅದರ ಮೇಲೆ ‘ವಿತ್ ಲಾಟ್ಸ್ ಆಫ್ ಲವ್ ಟು ಡಿಯರೆಸ್ಟ್ ಫ್ರೆಂಡ್ ಅನುಶ್ರೀ’ ಎಂದು ಬರೆದು ಸಹಿ ಹಾಕಿ ತಮ್ಮ ಕೈಯಾರೆ ಜಾಕೆಟ್ ತೊಡಿಸಿ ಮತ್ತೊಮ್ಮೆ ಮಮತೆ ಮೆರೆದ ಪ್ರೀತಿಯ ಮುತ್ತಣ್ಣ. ಥ್ಯಾಂಕ್ಯೂ ಶಿವಣ್ಣ ನಿಮ್ಮ ರೂಪದಲ್ಲಿ ನಾವು ನಮ್ಮ ಪರಮಾತ್ಮನನ್ನು ನೋಡುತ್ತಿದ್ದೇವೆ’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಜಾವೇದ್ ಹಬೀಬ್, ಆತನ ಮಗನ ವಿರುದ್ಧ 23 ಪ್ರಕರಣ, ಲುಕ್‌ ಔಟ್ ನೋಟಿಸ್ ಜಾರಿ

ದರ್ಶನ್ ಜೈಲು ಸೇರಿದ ಬೆನ್ನಲ್ಲೇ ಫಾರ್ಮ್ ಹೌಸ್ ನ ಕುದುರೆಗಳ ಮಾರಾಟ

ರಾಜ್ಯ ಸರ್ಕಾರದ ವಿಶೇಷ ಯೋಜನೆಗೆ ರಾಯಭಾರಿಯಾದ ವಸಿಷ್ಠ ಸಿಂಹ

ಬಿಗ್‌ಬಾಸ್‌ ವೀಕ್ಷಕರಲ್ಲಿ ಕ್ಷಮೆಕೋರಿದ ಕಲರ್ಸ್ ಕನ್ನಡ ವಾಹಿನಿ

ರಾತ್ರೋರಾತ್ರಿ ದೊಡ್ಮನೆಯಿಂದ ಹೊರಬಂದ ಸ್ಪರ್ಧಿಗಳು, ರಕ್ಷಿತಾ ಹೇಳಿದ ಆ ಮಾತಿಗೆ ತಥಾಸ್ತು ಎಂದ್ರಾ ದೇವರು

ಮುಂದಿನ ಸುದ್ದಿ
Show comments