Webdunia - Bharat's app for daily news and videos

Install App

ಶಿವಣ್ಣ ಕ್ಯಾನ್ಸರ್‌ ಚಿಕಿತ್ಸೆಗೆ ಆರು ಆಪರೇಷನ್‌ ಮಾಡಿ ಬರೋಬ್ಬರಿ 190 ಹೊಲಿಗೆ ಹಾಕಿದ ವೈದ್ಯರು

Sampriya
ಬುಧವಾರ, 15 ಜನವರಿ 2025 (14:25 IST)
ಬೆಂಗಳೂರು: ಕ್ಯಾನ್ಸರ್‌ ಚಿಕಿತ್ಸೆಗೆ ಅಮೆರಿಕಾಕ್ಕೆ ತೆರಳಿದ್ದ ಹ್ಯಾಟ್ರಿಕ್‌ ಹೀರೊ ನಟ ಶಿವರಾಜ್‌ಕುಮಾರ್‌ ಅವರಿಗೆ ಆರು ಆಪರೇಷನ್‌ ಮಾಡಿ 190 ಹೊಲಿಗೆ ಹಾಕಲಾಗಿದೆ. ಅವರು ಚೇತರಿಸಿಕೊಳ್ಳುತ್ತಿದ್ದು, ಶೀಘ್ರದಲ್ಲೇ ಭಾರತಕ್ಕೆ ವಾಪಸಾಗಲಿದ್ದಾರೆ.

ಶಿವಣ್ಣ ಅವರ ತಲೆಯಲ್ಲಿ ಒಂದು ಸ್ಟಂಟ್ ಇದೆ. ಹೃದಯದಲ್ಲಿ ಒಂದು ಸ್ಟಂಟ್ ಇದ್ದು ಜ.25 ರಂದು ಬೆಂಗಳೂರಿಗೆ ಬರುತ್ತಾರೆ ಎಂದು ಅವರ ಭಾವ ಮಧು ಬಂಗಾರಪ್ಪ ಹೇಳಿದ್ದಾರೆ.

ಶಿವಣ್ಣ ಅವರಿಗೆ ಐದೂವರೆ ಗಂಟೆ ಆಪರೇಷನ್‌ಗೆ ವೈದ್ಯರು ಪ್ಲ್ಯಾನ್‌ ಮಾಡಿದ್ದರು. ಆದರೆ ನಾಲ್ಕು ಮುಕ್ಕಾಲು ಗಂಟೆಗೆ ಆಪರೇಷನ್‌ ಮುಗಿಯಿತು. ಮ್ಯಾನ್ಯುವಲಿ ಮಾಡಬೇಕಾ? ಅಥವಾ ರೋಬೋಟಿಕ್ ಮಾಡಬೇಕಾ ಅಂತ ಎರಡು ಚರ್ಚೆ ನಡೆಯಿತು. ರೋಬೋಟಿಕ್‌ ಆದರೆ ಏಳೆಂಟು ಹೋಲ್ ಮಾಡಿ ದೇಹವನ್ನು ಉಲ್ಟಾ ಮಲಗಿಸಿ ಮಾಡುತ್ತಾರೆ. ಕೊನೆಗೆ ಮ್ಯಾನ್ಯುವಲ್ ಮಾಡೋದು ಸೂಕ್ತ ಅಂತ ನಿರ್ಧಾರ ಮಾಡಲಾಯಿತು ಎಂದು ಮಧು ಹೇಳಿದರು.

ಶಿವಣ್ಣ ಅವರಿಗೆ ಈಗ 63 ವಯಸ್ಸು. ಆದರೆ, ಅಮೆರಿಕಾದಿಂದ ವಾಪಸ್ ಬಂದಮೇಲೆ 36 ರ ರೀತಿ ಕಾಣಿಸುತ್ತಾರೆ. ವೈದ್ಯರ ನಮ್ಮ ಕುಟುಂಬದ ಸದಸ್ಯರಂತೆ ಇದ್ದರು. ಶಿವಣ್ಣ ಫೋಟೋ ಜೊತೆಗೆ ವೈದ್ಯರ ಫೋಟೋ ಕೂಡ ಇಲ್ಲಿ ಅಭಿಮಾನಿಗಳು ಪೂಜೆ ಮಾಡಿದ್ದರು. ಅದನ್ನು ನೋಡಿ ವೈದ್ಯರು ಕೂಡ ಕಣ್ಣೀರು ಹಾಕಿಕೊಂಡರು ಎಂದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments