ಕ್ಯಾನ್ಸರ್‌ ಗೆದ್ದ ಬಳಿಕ ಶಿವಣ್ಣ ಡಿಸ್ಚಾರ್ಜ್‌: ಆಸ್ಪತ್ರೆ ಪಕ್ಕ ಜಾಲಿಮೂಡ್‌ನಲ್ಲಿ ಹ್ಯಾಟ್ರಿಕ್‌ ಹೀರೋ

Sampriya
ಶನಿವಾರ, 4 ಜನವರಿ 2025 (14:22 IST)
Photo Courtesy X
ಬೆಂಗಳೂರು: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಹ್ಯಾಟ್ರಿಕ್‌ ಹೀರೋ ನಟ ಶಿವರಾಜ್‌ ಕುಮಾರ್‌ ಅವರು ಅಮೆರಿಕದಲ್ಲಿ ಸರ್ಜರಿ ನಂತರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ನಟ ಶಿವರಾಜ್​ಕುಮಾರ್ ಅವರು ಇತ್ತೀಚೆಗೆ ಮೂತ್ರಕೋಶದ ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಅಮೆರಿಕಾದ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್‌ನಲ್ಲಿ  ಶಸ್ತ್ರಚಿಕಿತ್ಸೆ ಕೂಡ ಅವರು ಮಾಡಿಸಿಕೊಂಡಿದ್ದರು.

ಈಗ ಅವರು ಕ್ಯಾನ್ಸರ್ ಮುಕ್ತರಾಗಿದ್ದಾರೆ. ಡಿಸೆಂಬರ್ ಅಂತ್ಯಕ್ಕೆ ಶಸ್ತ್ರಚಿಕಿತ್ಸೆ ನಡೆದಿತ್ತು. ಈಗ ಶಿವಣ್ಣ ಅವರು ಫಿಟ್ ಆ್ಯಂಡ್ ಫೈನ್​ ಆಗಿದ್ದಾರೆ.  ಶಿವಣ್ಣ ಅವರು ಆಸ್ಪತ್ರೆ ಪಕ್ಕದಲ್ಲೇ ಇರುವ ಹೋಟೆಲ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಅಮೆರಿಕದಲ್ಲಿ ಕುಟುಂಬದ ಜೊತೆ ನಿಂತಿರುವ ಫೋಟೋ ವೈರಲ್ ಆಗಿದೆ.

ಕ್ಯಾನ್ಸರ್ ಸರ್ಜರಿ ಯಶಸ್ವಿ ಆಗಿದ್ದರೂ ಕೆಲ ದಿನಗಳ ಕಾಲ ಅವರು ಅಲ್ಲಿಯೇ ಮೇಲ್ವಿಚಾರಣೆಯಲ್ಲಿ ಇರಲಿದ್ದಾರೆ. ಹೀಗಾಗಿ, ಜನವರಿ 24ರವರೆಗೆ ಶಿವರಾಜ್​ಕುಮಾರ್ ಅಮೆರಿಕದಲ್ಲೇ ಇರಬೇಕಾದ ಅನಿವಾರ್ಯತೆ ಇದೆ. ಆ ಬಳಿಕ ಅವರು ಬೆಂಗಳೂರಿಗೆ ಬಂದ ವಿಶ್ರಾಂತಿ ಪಡೆಯಲಿದ್ದಾರೆ. ನಂತರ ಶಿವರಾಜ್​ಕುಮಾರ್ ಅವರು ಸಿನಿಮಾ ಕೆಲಸಕ್ಕೆ ಮರಳಲಿದ್ದಾರೆ.

ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ಗುಣಮುಖರಾದ ಶಿವಣ್ಣ ಕೆಲ ದಿನಗಳ ಹಿಂದಷ್ಟೇ ಅಭಿಮಾನಿಗಳಿಗೆ ವೀಡಿಯೋ ಸಂದೇಶ ಕಳುಹಿಸಿದ್ದರು. ಕ್ಯಾನ್ಸರ್‌ನಿಂದ ಗುಣಮುಖರಾಗಿರುವ ಬಗ್ಗೆ ಸಂತಸ ಹಂಚಿಕೊಂಡಿದ್ದರು. ಶೀಘ್ರವೇ ಬೆಂಗಳೂರಿಗೆ ವಾಪಸ್‌ ಆಗಿ ಸಿನಿಮಾ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ಮಂಜು ಮನೋಜ್ ಶುರು ಮಾಡಿರುವ ಹೊಸ ಬಿಸಿನೆಸ್ ಏನ್ ಗೊತ್ತಾ

ನೀವು ಹೋದರೂ ನಮ್ಮ ಜೊತೆಯಲ್ಲೇ ಇದ್ದೀರಾ: ಸುಮಲತಾ ಭಾವುಕಾ ಪೋಸ್ಟ್

ನಟ ಧರ್ಮೇಂದ್ರ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಸಂತಾಪ

ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ವಿಧಿವಶ

ಜಸ್ಟ್ ಫ್ರೆಂಡ್ಸ್ ಎನ್ನುತ್ತಲೇ ದಾಂಪತ್ಯ ಜೀವನಕ್ಕಿಡಲು ಸಜ್ಜಾದ ಮಾನಸ ಶಿವು ಜೋಡಿ

ಮುಂದಿನ ಸುದ್ದಿ
Show comments