Select Your Language

Notifications

webdunia
webdunia
webdunia
webdunia

ಶಿವರಾತ್ರಿಗೆ ‘ಶಿವಾಜಿ ಸುರತ್ಕಲ್’ ತೆರೆಗೆ

ಶಿವರಾತ್ರಿಗೆ ‘ಶಿವಾಜಿ ಸುರತ್ಕಲ್’ ತೆರೆಗೆ
ಬೆಂಗಳೂರು , ಮಂಗಳವಾರ, 18 ಫೆಬ್ರವರಿ 2020 (21:25 IST)
ಸ್ಯಾಂಡಲ್‍ವುಡ್‍ನಲ್ಲಿ ತ್ಯಾಗರಾಜ ಅಂತಲೇ ಫೇಮಸ್ ಆಗಿರೋ ಸ್ಫುರದ್ರೂಪಿ ನಟ ರಮೇಶ್ ಅರವಿಂದ್ ಯಾವುದಾದರೊಂದು ಸಿನ್ಮಾ ಮಾಡ್ತಿದ್ದಾರೆ ಅಂದ್ರೆ ಅಲ್ಲೊಂದು ವಿಶೇಷತೆ ಇರತ್ತೆ.

ಸದ್ಯ ನಿರ್ದೇಶನ,ನಟನೆ,ನಿರೂಪಣೆ ಎಲ್ಲದರಲ್ಲೂ ಕ್ರಿಯೇಟಿವ್ ಆಗಿರೋ ರಮೇಶ್ ಅರವಿಂದ್   ನಟನೆಯ ‘ಶಿವಾಜಿ ಸುರತ್ಕಲ್’ ಚಿತ್ರ ಶುರುವಾದಾಗಿನಿಂದ ಕ್ಯೂರಿಯಾಸಿಟಿಯನ್ನ ಹುಟ್ಟುಹಾಕಿತ್ತು. ನಟ ರಮೇಶ್ ಡಿಟೆಕ್ಟೀವ್ ರೋಲ್ ನಲ್ಲಿ ಕಾಣಿಸಿಕೊಳ್ತಿರೋ ಪೋಸ್ಟರ್ ನೋಡಿದಾಗಲೇ ಕುತೂಹಲ ಇಮ್ಮಡಿಯಾಗಿತ್ತು.

webdunia

ಅದಾದ್ಮೆಲೆ ಚಿತ್ರದ  ಟ್ರೈಲರ್ ಬಿಡುಗಡೆಯಾಗಿ  ಚಿತ್ರದಲ್ಲಿ ಡಿಟೆಕ್ಟಿವ್ ಪಾತ್ರದಲ್ಲಿ ಎರಡು ವಿಭಿನ್ನ ಶೇಡ್‍ನಲ್ಲಿ ರಮೇಶ್ ಅರವಿಂದ್ ಕಾಣಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಎಲ್ಲರಿಗೂ ಸಖತ್ ಥ್ರಿಲ್ ಕೊಟ್ಟಿದ್ರು.
webdunia
‘ಶಿವಾಜಿ ಸುರತ್ಕಲ್’ ಪತ್ತೇದಾರಿ ಕಥಾನಕ ಸಬ್ಜೆಕ್ಟ್ ಇರೋ ಸಿನಿಮಾ. ರಣಗಿರಿಯಲ್ಲಿ ಅನುಮಾನಾಸ್ಪದವಾಗಿ ನಡಿಯೋ ಕೊಲೆ ರಹಸ್ಯವನ್ನು ಭೇದಿಸುವ ಪಾತ್ರಕ್ಕೆ ರಮೇಶ್ ಅರವಿಂದ್ ಬಣ್ಣಹಚ್ಚಿದ್ದಾರೆ.. ಸಸ್ಪೆನ್ಸ್, ಥ್ರಿಲ್ಲಿಂಗ್ ಮತ್ತು ಹಾರಾರ್ ಸಬ್ಜೆಕ್ಟ್ ಇರೋ ಈ ಚಿತ್ರಕ್ಕೆ ಆಕಾಶ್ ಶ್ರೀವತ್ಸ ನಿರ್ದೇಶನವಿದೆ. ಚಿತ್ರದಲ್ಲಿ ನಾಯಕಿಯರಾಗಿ ರಾಧಿಕಾ ನಾರಾಯಣ್, ಆರೋಹಿ ಅಭಿನಯಿಸಿದ್ದಾರೆ.
webdunia

ಅವಿನಾಶ್, ರಮೇಶ್ ಪಂಡಿತ್, ರೋಹಿತ್ ಭಾನುಪ್ರಕಾಶ್, ರಾಘು ರಮಣಕೊಪ್ಪ ಸೇರಿದಂತೆ ಹಲವರ ತಾರಾಬಳಗವಿದೆ. ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನ, ಗುರುಪ್ರಸಾಧ್ ಎಂ.ಜಿ ಕ್ಯಾಮೆರಾ ಕೈ ,ಚಳಕ  ‘ಶಿವಾಜಿ ಸುರತ್ಕಲ್’ನಲ್ಲಿ ಥ್ರಿಲ್ ಕೊಡೋಕೆ ರೆಡಿಯಿದ್ದು, ಈ ಬಾರಿಯ ಶಿವರಾತ್ರಿ ಸ್ಪೆಷಲ್ ಆಗಿ ಚಿತ್ರ ತೆರೆಗೆ ಬರೋಕೆ ಸಜ್ಜಾಗಿದೆ.
webdunia

ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಬ್ಯಾನರ್ ನಡಿ ಚಿತ್ರ ನಿರ್ಮಾಣವಾಗಿದ್ದು, ರೇಖಾ.ಕೆ.ಎನ್, ಅನೂಪ್ ಗೌಡ ಚಿತ್ರಕ್ಕೆ ಬಂಡವಾಳ ಹೂಡಿರೋ ‘ಶಿವಾಜಿ ಸುರತ್ಕಲ್’ ಇದೇ ಫೆಬ್ರವರಿ 21ಕ್ಕೆ ಚಿತ್ರಮಂದಿರಕ್ಕೆ ಬರಲಿದ್ದು, ಸಿನ್ಮಾ ನೋಡಿದ ಪ್ರೇಕ್ಷಕ ಅದೆಷ್ಟು ಥ್ರಿಲ್ ಆಗ್ತಾನೋ ಅನ್ನೋದನ್ನ ಕಾದು ನೋಡ್ಬೇಕಿದೆ

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ಉದ್ಯಮ ಶುರು ಮಾಡಿಕೊಂಡ ಕಿರುತೆರೆಯ ಸ್ಟಾರ್ ನಿರ್ಮಾಪಕಿ ಶ್ರುತಿ ನಾಯ್ಡು