Publish Date: Mon, 17 Feb 2020 (10:12 IST)
Updated Date: Mon, 17 Feb 2020 (10:14 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿನ್ನೆ ದಿನ ಬರ್ತ್ ಡೇ ಆಚರಿಸಿಕೊಂಡಿದ್ದರು. ತಮ್ಮ ಪ್ರೀತಿಯ ನಟನಿಗೆ ವಿಶ್ ಮಾಡಲು ಅವರ ಮನೆ ಮುಂದೆ ಜನ ಸಾಗರವೇ ಹರಿದುಬಂದಿತ್ತು.
ಹಾಗಿದ್ದರೂ ದರ್ಶನ್ ತಮ್ಮ ಸಿನಿಮಾ ಕೆಲಸವನ್ನು ಮರೆಯಲಿಲ್ಲ. ಬರ್ತ್ ಡೇಯ ಬ್ಯುಸಿಯ ನಡುವೆಯೂ ತಮ್ಮ ಸಿನಿಮಾ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
ರಾಬರ್ಟ್ ಸಿನಿಮಾದ ಡಬ್ಬಿಂಗ್ ಕೆಲಸಗಳು ನಡೆಯುತ್ತಿದ್ದು, ದರ್ಶನ್ ನಿನ್ನೆ ಕೆಲವು ಸಮಯ ಬಿಡುವು ಮಾಡಿಕೊಂಡು ತಮ್ಮ ಪಾಲಿನ ಕೆಲಸ ಮಾಡಿದ್ದಾರೆ.
Krishnaveni K
Publish Date: Mon, 17 Feb 2020 (10:12 IST)
Updated Date: Mon, 17 Feb 2020 (10:14 IST)