Select Your Language

Notifications

webdunia
webdunia
webdunia
webdunia

ಹಲವು ವಿಶೇಷತೆ ಗಳ ಶಿವಾಜಿ ಸುರತ್ಕಲ್ ಶಿವರಾತ್ರಿಗೆ

ರಮೇಶ್ ಅರವಿಂದ್
ಬೆಂಗಳೂರು , ಸೋಮವಾರ, 17 ಫೆಬ್ರವರಿ 2020 (20:20 IST)
ಕೆಲವು ಸಿನೆಮಾಗಳೇ ಹಾಗೆ ಶುರುವದಾಗಿನಿಂದ ಒಂದೊಂದೇ ಜಲಕ್ ಬಿಟ್ಟು ಸಿನ್ಮಾ ಮೇಲಿನ ಕುತೂಹಲವನ್ನ ಇಮ್ಮಡಿ ಗೊಳಿಸಿರ್ತಾವೆ. ಈಗೀಗ ಸಸ್ಪೇನ್ಸ್,ಥ್ರಿಲ್ಲರ್ ಹಾಗು ಹಾರಾರ್ ಸಿನ್ಮಗಳು ರೆಗ್ಯುಲರ್ ಕಾನ್ಸೆಪ್ಟ್ ಚಿತ್ರಗಳಿಗಿಂತ ತುಸು ,ಹೆಚ್ಚು ಕ್ಲಿಕ್ ಆಗ್ತಿವೆ. ಅಂಥಹದ್ದೇ ಸಾಲಿಗೆ ಸೇರಿರೋ ಸೂಪರ್ ಎಕ್ಸೈಟೆಡ್ ಚಿತ್ರವೇ ‘ಶಿವಾಜಿ ಸುರತ್ಕಲ್’ .
ಪೋಸ್ಟರ್ನಿಂದಲೇ ಕುತೂಹಲ ಕೆರಳಿಸಿದ್ದ ಶಿವಾಜಿ ಸುರತ್ಕಲ್ ಸಿನಿಮಾದಲ್ಲಿ ರಮೇಶ್ ಅರವಿಂದ್ ಪತ್ತೇದಾರಿಯಾಗಿ ಕಾಣಿಸಿಕೊಳ್ತಿದ್ದಾರೆ ಅನ್ನೋದು ಗೊತ್ತಾದಮೇಲಂತೂ ಇನ್ನೂ ಕುತೂಹಲ ಹೆಚ್ಚಾಗಿತ್ತು.

ಇವರಿಗೆ ನಾಯಕಿಯಾಗಿ 'ರಂಗಿತರಂಗ', 'ಕಾಫಿತೋಟ', 'ಯೂ- ಟರ್ನ್' ನಂತರ ಮತ್ತೊಮ್ಮೆ ರಾಧಿಕಾ ಚೇತನ್ ಸಸ್ಪೆನ್ಸ್ ಕಥಾಹಂದರವಿರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಆರೋಹಿ ನಾರಾಯಣ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
ಇದುವರೆಗೂ ಮಾಡಿರದ ಪಾತ್ರದಲ್ಲಿ ರಮೇಶ್ ಅರವಿಂದ್ ಕಾಣಿಸಿಕೊಂಡಿರುವುದು ಈ ಸಿನಿಮಾದ ವಿಶೇಷತೆಗಳಲ್ಲೊಂದು. 'ಶಿವಾಜಿ ಸುರತ್ಕಲ್- ದಿ ಕೇಸ್ ಆಫ್ ರಣಗಿರಿ ರಹಸ್ಯ' ಎಂಬ ಅಡಿಬರಹವಿರುವ ಈ ಸಿನಿಮಾವನ್ನು ಆಕಾಶ್ ಶ್ರೀವತ್ಸ  ನಿರ್ದೇಶಿಸಿದ್ದಾರೆ.

ಸಸ್ಪೇನ್ಸ್ ಮತ್ತು ಹಾರಾರ್ ಎಲಿಮೆಂಟ್ ನ ಈ ಚಿತ್ರದ ಟ್ರೈಲರ್ ರಿಲೀಸ್ ಆಗಿ ಚಿತ್ರದ ಬಗೆಗಿನ ನಾನಾ ಸ್ಟಾಪ್ ಕೌತುಕಕ್ಕೆ ಸ್ಮಾಲ್ ಗ್ಯಾಪ್ ಕೊಟ್ಟಿತ್ತಾದರೂ, ಇದೇ 21 ಕ್ಕೆ ಸಿನ್ಮಾ ರಿಲೀಸ್ ಅಂತ ಗೊತ್ತಾದಮೇಲಂತೂ ಸಿನಿಪ್ರಿಯರು ಫುಲ್ ಖುಷ್ ಆಗಿದ್ದಾರೆ.

ಜೂಡಾ ಸ್ಯಾಂಡಿ ಸಂಗೀತ  ಸಂಯೋಜನೆ ಕೇಳುಗರನ್ನ ಮೋಸ ಮಾಡೋದಿಲ್ಲ ಅನ್ನೋ ಭರವಸೆಯೊಂದಿಗೆ ಈ ಸಲದ ಶಿವರಾತ್ರಿ ಯನ್ನ ಹಬ್ಬದೊಂದಿಗೆ,ಸಿನ್ಮಾವನ್ನೂ ನೋಡಿ ಡಬಲ್ ಧಮಾಕ ಮಾಡೋಕೆ ಪ್ರೇಕ್ಷಕ ರಂತೂ ಕಾದಿರೋದು ನಿಜ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಾಶಿವರಾತ್ರಿಗೆ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಡಲಿದ್ದಾರೆ ಕಿಚ್ಚ ಸುದೀಪ್