Publish Date: Tue, 18 Feb 2020 (09:10 IST)
Updated Date: Tue, 18 Feb 2020 (09:13 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರ್ತ್ ಡೇ ದಿನ ಪುನೀತ್ ರಾಜಕುಮಾರ್ ವಿಶ್ ಮಾಡಿದ್ದಕ್ಕೆ ದರ್ಶನ್ ಅಭಿಮಾನಿಯೊಬ್ಬರು ಮಾಡಿದ ಟ್ವೀಟ್ ಇಬ್ಬರ ಅಭಿಮಾನಿಗಳ ನಡುವೆ ಟ್ವೀಟ್ ವಾರ್ ಗೆ ಕಾರಣವಾಗಿತ್ತು.
ದರ್ಶನ್ ಥರಾ ಬೆಳೆಯಿರಿ ಎಂದು ಪುನೀತ್ ಗೆ ಅಭಿಮಾನಿಯೊಬ್ಬ ಟ್ವೀಟ್ ಮಾಡಿದ್ದು ಪುನೀತ್ ಅಭಿಮಾನಿಗಳನ್ನು ಕೆರಳಿಸಿತ್ತು. ಆದರೆ ಇದೀಗ ಇಬ್ಬರೂ ಸ್ಟಾರ್ ನಟರೂ ಒಂದೇ ಸಮಯದಲ್ಲಿ ತೆರೆಗೆ ಬರಲು ಸಿದ್ಧರಾಗಿದ್ದಾರೆ.
ದರ್ಶನ್ ರಾಬರ್ಟ್ ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದರೆ ಪುನೀತ್ ತಮ್ಮ ಯುವರತ್ನ ಬಿಡುಗಡೆಗೆ ಸಿದ್ಧರಾಗಿದ್ದಾರೆ. ಈಗಾಗಲೇ ಪುನೀತ್ ಯುವರತ್ನ ಏಪ್ರಿಲ್ ನಲ್ಲಿ ಬಿಡುಗಡೆಯಾಗುವುದಾಗಿ ಹೇಳಿದ್ದಾರೆ. ಇದೀಗ ದರ್ಶನ್ ಕೂಡಾ ರಾಬರ್ಟ್ ಸಿನಿಮಾ ಮಾರ್ಚ್ ಅಥವಾ ಏಪ್ರಿಲ್ ನಲ್ಲಿ ಬಿಡುಗಡೆಯಾಗುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲಿಗೆ ಇಬ್ಬರು ಸ್ಟಾರ್ ನಟರ ಸಿನಿಮಾಗಳು ಒಂದೇ ಸಮಯದಲ್ಲಿ ತೆರೆಗೆ ಬರುವುದು ಪಕ್ಕಾ ಆಗಿದೆ. ಆದರೆ ಇದೇ ವಿಚಾರದಲ್ಲಿ ಅಭಿಮಾನಿಗಳು ಮತ್ತೆ ಟ್ವೀಟ್ ಸಮರ ಮುಂದುವರಿಸಿದಿದ್ದರೆ ಸಾಕು ಎನ್ನುವುದೇ ನಮ್ಮ ಹಾರೈಕೆ.