ತಿರುಪತಿ: ಅನಾರೋಗ್ಯದ ಚಿಕಿತ್ಸೆಗಾಗಿ ಅಮೆರಿಕಾಗೆ ತೆರಳುವ ಮೊದಲು ನಟ ಶಿವರಾಜ್ ಕುಮಾರ್ ಪತ್ನಿ ಸಮೇತರಾಗಿ ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ಭೇಟಿ ಕೊಟ್ಟಿದ್ದು ಮುಡಿ ಕೊಟ್ಟಿದ್ದಾರೆ.
ತಿರುಪತಿ ದೇವಾಲಯದಲ್ಲಿ ಪತ್ನಿ ಗೀತಾ ಮತ್ತು ಸಂಗಡಿಗರ ಜೊತೆ ಶಿವರಾಜ್ ಕುಮಾರ್ ಭೇಟಿ ಕೊಟ್ಟಿದ್ದು ಮುಡಿ ಹರಕೆ ತೀರಿಸಿದ್ದಾರೆ. ಇಂದು ಬೆಳಿಗ್ಗೆಯೇ ಮುಡಿ ಹರಕೆ ತೀರಿಸಿ ದೇವರ ದರ್ಶನ ಪಡೆದಿದ್ದಾರೆ. ತಿರುಪತಿ ಸನ್ನಿಧಾನದಲ್ಲಿ ಹೊಸ ಲುಕ್ ನಲ್ಲಿ ಶಿವಣ್ಣ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇತ್ತೀಚೆಗಿನ ದಿನಗಳಲ್ಲಿ ಶಿವಣ್ಣ ಜೀವನದಲ್ಲಿ ಹಲವು ಮಹತ್ವದ ವಿಚಾರಗಳು ನಡೆದಿವೆ. ಇತ್ತೀಚೆಗಷ್ಟೇ ಭೈರತಿ ರಣಗಲ್ ಸಿನಿಮಾ ಬಿಡುಗಡೆಯಾಗಿ ಭರ್ಜರಿ ಸಕ್ಸಸ್ ಕಂಡಿತ್ತು. ಇದರ ನಡುವೆಯೇ ಅವರು ಫಾರ್ಮ್ ಹೌಸ್ ಒಂದನ್ನು ಖರೀದಿಸಿ ಗೃಹಪ್ರವೇಶವನ್ನೂ ಮಾಡಿಕೊಂಡಿದ್ದಾರೆ.
ಇನ್ನು, ಅವರಿಗೆ ಆರೋಗ್ಯ ಸಮಸ್ಯೆ ಕಂಡುಬಂದಿದ್ದು ಸದ್ಯದಲ್ಲೇ ಅಮೆರಿಕಾಗೆ ತೆರಳಿ ಶಸ್ತ್ರಚಿಕಿತ್ಸೆಗೊಳಗಾಗಲಿದ್ದಾರೆ. ಇದನ್ನು ಅವರೇ ಖಚಿತಪಡಿಸಿದ್ದಾರೆ. ಇದರಲ್ಲಿ ಮುಚ್ಚಿಡುವಂತಹದ್ದು ಏನಿಲ್ಲ. ಮತ್ತೆ ವಾಪಸ್ ಬರ್ತೀನಿ ಎಂದಿದ್ದಾರೆ. ಇದೆಲ್ಲಾ ಬೆಳವಣಿಗೆಗಳ ನಡುವೆ ಅವರು ತಿರುಪತಿ ತಿಮ್ಮಪ್ಪನ ಮೊರೆ ಹೋಗಿದ್ದಾರೆ.