Webdunia - Bharat's app for daily news and videos

Install App

ಕೆಡಿ ಚಿತ್ರೀಕರಣ ಮುಗಿದ ಬೆನ್ನಲ್ಲೇ ಡೈರೆಕ್ಟರ್ ಪ್ರೇಮ್ ಕುತ್ತಿಗೆಗೆ ಕೈ ಹಾಕಿದ ಶಿಲ್ಪಾ ಶೆಟ್ಟಿ

Krishnaveni K
ಶುಕ್ರವಾರ, 31 ಮೇ 2024 (08:45 IST)
Photo Credit: Instagram
ಬೆಂಗಳೂರು: ಜೋಗಿ ಪ್ರೇಮ್ ನಿರ್ದೇಶನದ ಧ್ರುವ ಸರ್ಜಾ ನಾಯಕರಾಗಿರುವ ಕೆಡಿ ಸಿನಿಮಾದಲ್ಲಿ ಶಿಲ್ಪಾ ಶೆಟ್ಟಿ ಕೂಡಾ ನಟಿಸುತ್ತಿದ್ದು ಇದೀಗ ಚಿತ್ರೀಕರಣ ಪೂರ್ತಿ ಮಾಡಿದ್ದಾರೆ.

ನಟಿ ಶಿಲ್ಪಾ ಶೆಟ್ಟಿ ಚಿತ್ರತಂಡದೊಂದಿಗೆ ಕೊನೆಯ ದಿನದ ಶೂಟಿಂಗ್ ನ ವಿಡಿಯೋವನ್ನು ಸೋಷಿಯಲ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು ನಮ್ಮ ಕನ್ನಡತಿ ನಮ್ಮ ಕನ್ನಡ ಸಿನಿಮಾದಲ್ಲಿ ನಟಿಸುತ್ತಿರುವುದು ನಮ್ಮ ಹೆಮ್ಮೆ ಎಂದಿದ್ದಾರೆ.

ಈ ಸಿನಿಮಾದಲ್ಲಿ ಶಿಲ್ಪಾ ಸತ್ಯವತಿ ಎನ್ನುವ ಪಾತ್ರ ಮಾಡುತ್ತಿದ್ದಾರೆ. ಸೀರೆ, ಮಾಂಗಲ್ಯ ತೊಟ್ಟುಕೊಂಡು ಲಘುವಾದ ಮೇಕಪ್ ಮಾಡಿಕೊಂಡು ಶಿಲ್ಪಾ ಕೊನೆಯ ದಿನದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ.

ಚಿತ್ರೀಕರಣದಲ್ಲಿ ಅವರು ಚಿತ್ರತಂಡದವರೊಂದಿಗೆ ತಾವೊಬ್ಬ ಬಾಲಿವುಡ್ ನಟಿ ಎಂಬ ಸ್ವಲ್ಪವೂ ಹಮ್ಮು ಬಿಮ್ಮುಗಳಿಲ್ಲದೇ ಆರಾಮವಾಗಿ ಬೆರೆತಿದ್ದಾರೆ. ಚಿತ್ರೀಕರಣ ಪೂರ್ತಿಯಾದ ಬಳಿಕ ಧನ್ಯವಾದ ಸಲ್ಲಿಸಿದ ನಿರ್ದೇಶಕ ಪ್ರೇಮ್ ಕುತ್ತಿಗೆಗೆ ಶಾಲು ಸುತ್ತಿ ನಾನು ಸತ್ಯವತಿ ಎಂದು ಜೋರಾಗಿ ಕೂಗಿ ಫನ್ ಮಾಡಿದ್ದಾರೆ. ಇವರ ತುಂಟಾಟದ ವಿಡಿಯೋವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾಂತಾರ ಸಿನಿಮಾ ಶೂಟಿಂಗ್‌ ಅವಘಡ ಸಂಬಂಧ ಹೊಂಬಾಳೆ ಫಿಲ್ಮ್ಸ್‌ ಸ್ಪಷ್ಟನೆ

Revanth Reddy: ಅಂದು ಜೈಲಿಗಟ್ಟಿದ್ದ ನಟನಿಗೆ ಇಂದು ಕೈಯಾರೆ ಕೊಡಬೇಕಾಯಿತು ಉತ್ತಮ ನಟ ಪ್ರಶಸ್ತಿ

ಕಾಂತಾರ ಪ್ರೀಕ್ವೆಲ್‌ ಚಿತ್ರೀಕರಣದ ವೇಳೆ ಮಗುಚಿದ ದೋಣಿ: ಅಪಾಯದಿಂದ ಪಾರಾದ ರಿಷಭ್‌ ಶೆಟ್ಟಿ ಮತ್ತು ತಂಡ

ಮೀಮ್ಸ್‌, ಟ್ರೋಲ್‌ಗಳು ನನ್ನನ್ನು ವ್ಯಾಖ್ಯಾನಿಸುವುದಿಲ್ಲ: ಕಾಲೆಳೆದ ನೆಟ್ಟಿಗರಿಗೆ ಬಿಪಾಶಾ ಕ್ಲಾಸ್‌

ಚಿತ್ರರಂಗದಿಂದ ಬ್ಯಾನ್ ಆಗಿದ್ದಕ್ಕೆ ಈ ಸ್ಟಾರ್ ನಟನ ಮೊರೆ ಹೋದ ಮಡೆನೂರು ಮನು

ಮುಂದಿನ ಸುದ್ದಿ
Show comments