Select Your Language

Notifications

webdunia
webdunia
webdunia
webdunia

ರಾಹುಲ್‌ ಗಾಂಧಿ ಮುಂದಿನ ಪ್ರಧಾನಿ ಎಂದ್ರಾ ನಟ ಶಾರುಖ್‌ ಖಾನ್

ರಾಹುಲ್‌ ಗಾಂಧಿ ಮುಂದಿನ ಪ್ರಧಾನಿ ಎಂದ್ರಾ ನಟ ಶಾರುಖ್‌ ಖಾನ್

sampriya

, ಗುರುವಾರ, 30 ಮೇ 2024 (19:06 IST)
Photo Credit Facebook
ಮುಂಬೈ: "ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾರತದ ಮುಂದಿನ ಪ್ರಧಾನಿ  ಎಂದು ಬರೆಯಲಾಗಿರುವ ನಟ ಶಾರುಖ್‌ ಖಾನ್‌ ಅವರ ಎಕ್ಸ್‌ ಫೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇದೀಗ ಫ್ಯಾಕ್ಟ್ ಚೆಕ್ ಡೆಸ್ಕ್ ತನ್ನ ತನಿಖೆಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ವೈರಲ್‌ ಪೋಸ್ಟ್‌ ಕಾಲ್ಪನಿಕ ಮತ್ತು ನಕಲಿ ಎಂದು ಹೇಳಿದೆ.

ತನಿಖೆ ಪ್ರಕಾರ ನಟ ಶಾರುಖ್‌ ಖಾನ್‌ ಅವರು ಇದುವರೆಗೂ ಕಾಂಗ್ರೆಸ್ ನಾಯಕನ ಬಗ್ಗೆ ಏನನ್ನೂ ಪ್ರಕಟಿಸಿಲ್ಲ ಎಂದು ತಿಳಿದುಬಂದಿದೆ.

ಇನ್‌ಸ್ಟಾಗ್ರಾಮ್ ಬಳಕೆದಾರರು ಮೇ 25 ರಂದು ಶಾರುಖ್ ಖಾನ್ ಅವರ X ಪೋಸ್ಟ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದು, ಪೋಸ್ಟ್‌ನಲ್ಲಿ ರಾಹುಲ್ ಗಾಂಧಿ ಅವರು ಮುಂದಿನ ಪ್ರಧಾನಿಯಾಗುತ್ತಾರೆ ಎಂದು ಬರೆಯಲಾಗಿದೆ.

ಪೋಸ್ಟ್‌ನ ಶೀರ್ಷಿಕೆ ಹೀಗಿದೆ: "ಅಬತೋ ಶಾಹರುಖ್ ಖಾನ್ ನೆ ಭಿ ಕಹದಿಯಾ
ರಾಹುಲ್ ಗಾಂಧಿ ಹೀ ಪ್ರಧಾನಮಂತ್ರಿ ಬನೇಂಗೆ...."

ಯೂಟ್ಯೂಬ್‌ನಲ್ಲೂ ಸ್ಕ್ರೀನ್‌ಶಾಟ್ ಅನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

ಇನ್ನೂ ನಟ ಪೋಸ್ಟ್‌ ಹಂಚಿಕೊಂಡಿರುವ ಬಗ್ಗೆ ಹುಡುಕಾಟವನ್ನು ನಡೆಸಿದಾಗ ಯಾವುದೇ ಪೋಸ್ಟ್‌ಗಳು ನಟನ ಎಕೌಂಟ್‌ನಿಂದ ಬಂದಿಲ್ಲ ಎಂದು ತಿಳಿದುಬಂದಿದೆ.  ಖಾನ್ ಅವರು ಮೇ ತಿಂಗಳಲ್ಲಿ ಪೋಸ್ಟ್ ಅನ್ನು ಮಾತ್ರ ಹಂಚಿಕೊಂಡಿದ್ದಾರೆ, ಇದರಲ್ಲಿ ಅವರು ಮಹಾರಾಷ್ಟ್ರದ ಜನರು ತಮ್ಮ ಫ್ರಾಂಚೈಸ್ ಅನ್ನು ಚಲಾಯಿಸಲು ಮತ್ತು ಮೇ 20 ರಂದು ನಡೆದ ಐದನೇ ಹಂತದ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ ಚಲಾಯಿಸುವಂತೆ ಒತ್ತಾಯಿಸಿದರು.

 

Share this Story:

Follow Webdunia kannada

ಮುಂದಿನ ಸುದ್ದಿ

ಮೂರು ದಿನ ನಡೆಯುವ ಅನಂತ್‌ ಅಂಬಾನಿ, ರಾಧಿಕಾ ಮದುವೆಗೆ ಡ್ರೆಸ್‌ಕೋಡ್‌ ಹೀಗಿದೆ