ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣದಲ್ಲಿ ರಾಗಿಣಿ, ಸಂಜನಾ ಬಳಿಕ ಈಗ ಮತ್ತೊಬ್ಬ ಸ್ಯಾಂಡಲ್ ವುಡ್ ನಟಿ ಶರ್ಮಿಳಾ ಮಾಂಡ್ರೆ ಬಗ್ಗೆಯೂ ಆರೋಪವೊಂದು ಕೇಳಿಬಂದಿದೆ.
ಲಾಕ್ ಡೌನ್ ವೇಳೆ ಶರ್ಮಿಳಾ ಕಾರು ಮಧ್ಯರಾತ್ರಿ ವೇಳೆ ಅಪಘಾತಕ್ಕೀಡಾಗಿದ್ದು ಸುದ್ದಿಯಾಗಿತ್ತು. ಆ ವೇಳೆಯೇ ಶರ್ಮಿಳಾ ಜತೆ ಡ್ರಗ್ ಪೆಡ್ಲರ್ ಇದ್ದ ಎಂಬಿತ್ಯಾದಿ ಸುದ್ದಿಗಳು ಹಬ್ಬಿದ್ದವು. ಆದರೆ ಈಗ ಆದಿತ್ಯ ಆಳ್ವಾ ರೆಸಾರ್ಟ್ ಮೇಲೆ ಸಿಸಿಬಿ ದಾಳಿ ನಡೆದ ಬಳಿಕ ಆ ದಿನದ ಆಕ್ಸಿಡೆಂಟ್ ಗೆ ಹೊಸ ಟ್ವಿಸ್ಟ್ ಸಿಕ್ಕಿದೆ.
ಆವತ್ತು ಏಪ್ರಿಲ್ 4 ರಂದು ಆದಿತ್ಯಾ ಆಳ್ವಾ ಆಯೋಜಿಸಿದ್ದ ಪಾರ್ಟಿಯಲ್ಲಿ ಭಾಗವಹಿಸಿದ್ದ ಶರ್ಮಿಳಾ ಬಳಿಕ ಇನ್ನೊಬ್ಬ ಸ್ನೇಹಿತನ ಜತೆ ಆದಿತ್ಯಾರ ಫ್ಲ್ಯಾಟ್ ಗೆ ತೆರಳಿದ್ದರು. ಬಳಿಕ ಏಪ್ರಿಲ್ 5 ರ ಮುಂಜಾವಿನ ವೇಳೆಗೆ ಆಕೆಯ ಕಾರು ಅಪಘಾತಕ್ಕೀಡಾಗುತ್ತದೆ. ಆಗ ಸ್ಥಳದಿಂದ ತೆರಳಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಶರ್ಮಿಳಾ ತಾನು ಮದ್ಯ ಸೇವಿಸಿರಲಿಲ್ಲ ಎಂಬಿತ್ಯಾದಿ ಸ್ಪಷ್ಟನೆ ನೀಡಿದ್ದರು. ಆದರೆ ನಿಜಾಂಶ ಈಗ ಬಯಲಾಗಿದ್ದು, ಶರ್ಮಿಳಾಗೆ ಹೊಸ ಸಂಕಷ್ಟ ತಂದೊಡ್ಡಲಿದೆ.