Publish Date: Sat, 31 Oct 2020 (12:04 IST)
Updated Date: Sat, 31 Oct 2020 (12:05 IST)
ಮುಂಬೈ: ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಶಕ್ತಿಮಾನ್ ಖ್ಯಾತಿಯ ನಟ ಮುಖೇಶ್ ಖನ್ನಾ ಈಗ ಟ್ವಿಟರಿಗರಿಂದ ಮಂಗಳಾರತಿ ಮಾಡಿಸಿಕೊಂಡಿದ್ದಾರೆ.
ಲೈಂಗಿಕ ದೌರ್ಜನ್ಯದ ವಿರುದ್ಧ ನಡೆಯುತ್ತಿರುವ ಮಿಟೂ ಅಭಿಯಾನಕ್ಕೆ ಮಹಿಳೆಯರೇ ಕಾರಣ ಎಂದು ಶಕ್ತಿಮಾನ್ ಖ್ಯಾತಿಯ ನಟ ನೀಡಿರುವ ಹೇಳಿಕೆ ನೆಟ್ಟಿಗರ ಕೆಂಗಣ‍್ಣಿಗೆ ಗುರಿಯಾಗಿದೆ. ಮಹಿಳೆಯರು ಮನೆಕೆಲಸಕ್ಕೆ ಲಾಯಕ್ಕು. ಅವರು ಪುರುಷರ ಸಮಾನ ಹೊರಗೆ ದುಡಿಯಲು ಪ್ರಾರಂಭಿಸಲು ಹೊರಟಿದ್ದೇ ಮೀಟೂ ಅಭಿಯಾನಕ್ಕೆ ಕಾರಣ ಎಂದು ಕೀಳು ಮಟ್ಟದ ಹೇಳಿಕೆ ನೀಡಿದ್ದರು. ಇದರ ವಿರುದ್ಧ ಈಗ ಹಲವರು ತಿರುಗಿಬಿದ್ದಿದ್ದಾರೆ. ಚಿಕ್ಕಮಕ್ಕಳಾಗಿದ್ದಾಗ ನಾವು ರೋಲ್ ಮಾಡೆಲ್ ಥರಾ ನೋಡುತ್ತಿದ್ದ ವ್ಯಕ್ತಿಯಿಂದ ಇಂಥಾ ಹೇಳಿಕೆ ನಿರೀಕ್ಷಿಸಿರಲಿಲ್ಲ ಎಂದು ಹಲವರು ಕಿಡಿ ಕಾರಿದ್ದಾರೆ.