Publish Date: Sat, 31 Oct 2020 (09:55 IST)
Updated Date: Sat, 31 Oct 2020 (09:57 IST)
ಬೆಂಗಳೂರು: ಕೊಡಗಿನ ಬೆಡಗಿ ನಟಿ ಹರ್ಷಿಕಾ ಪೂಣಚ್ಚ ಈಗ ಸಂಭ್ರಮದಲ್ಲಿದ್ದಾರೆ. ತಮ್ಮ ಕನಸಿನ ಮನೆ ಕಟ್ಟಿಸಿದ ಖುಷಿಯಲ್ಲಿದ್ದಾರೆ.
ತಮ್ಮ ತವರೂರು ಕೊಡಗಿನ ವಿರಾಜಪೇಟೆಯಲ್ಲಿ ತಮ್ಮದೇ ಸ್ವಂತ ಮನೆ ಕಟ್ಟಿಸಿ ಕುಟುಂಬ ಸಮೇತರಾಗಿ ಶಾಸ್ತ್ರೋಸ್ತ್ರವಾಗಿ ಗೃಹಪ್ರವೇಶ ಮಾಡಿಕೊಂಡಿದ್ದಾರೆ. ಲಾಕ್ ಡೌನ್ ಕಾರಣ ಸ್ನೇಹಿತರು, ಅಭಿಮಾನಿಗಳನ್ನು ಕರೆದಿಲ್ಲ. ಆದರೆ ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಲಿದೆ ಎಂಬ ನಂಬಿಕೆಯಿದೆ ಎಂದಿದ್ದಾರೆ. ಇನ್ನು, ಗೃಹಪ್ರವೇಶದ ದಿನವೂ ಇತ್ತೀಗಷ್ಟೇ ಅಗಲಿದ ಅಪ್ಪನನ್ನು ನೆನೆದು ಭಾವುಕರಾಗಿದ್ದಾರೆ. ಅಪ್ಪನ ನೆನಪಿಗಾಗಿ ಮನೆಯಲ್ಲಿ ಅವರ ಭಾವಚಿತ್ರವನ್ನು ಹಾಕಿ ಗೌರವ ಸಲ್ಲಿಸಿದ್ದಾರೆ.