Select Your Language

Notifications

webdunia
webdunia
webdunia
webdunia

ಮಗನ ಸಿನಿಮಾ ಎಂಟ್ರಿ ಭರ್ಜರಿ ಮಾಡಲು ರಾಘವೇಂದ್ರ ರಾಜಕುಮಾರ್ ಸಿದ್ಧತೆ

webdunia
ಶುಕ್ರವಾರ, 30 ಅಕ್ಟೋಬರ್ 2020 (10:14 IST)
ಬೆಂಗಳೂರು: ರಾಘವೇಂದ್ರ ರಾಜಕುಮಾರ್ ಪುತ್ರ, ಡಾ.ರಾಜ್ ವಂಶದ ಕುಡಿ ಯುವರಾಜಕುಮಾರ್ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿರುವ ಸಿನಿಮಾ ಯುವ01. ಈ ಸಿನಿಮಾದ ಮೂಲಕ ಮಗನನ್ನು ಬೆಳ್ಳಿತೆರೆಗೆ ಅದ್ಧೂರಿಯಾಗಿಯೇ ಪರಿಚಯಿಸಲು ರಾಘವೇಂದ್ರ ರಾಜಕುಮಾರ್ ಸಿದ್ಧತೆ ನಡೆಸಿದ್ದಾರೆ.
 


ಯುವರಾಜಕುಮಾರ್ ಮೊದಲ ಸಿನಿಮಾದ ಅಡಿಯೋ ರಿಲೀಸ್ ಇದೇ ನವಂಬರ್ 1 ರಂದು ಅಂದರೆ ರಾಜ್ಯೋತ್ಸವದಂದು ನಡೆಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ರಾಘವೇಂದ್ರ ರಾಜಕುಮಾರ್, ಶಿವರಾಜ್ ಕುಮಾರ್, ಪುನೀತ್ ರಾಜಕುಮಾರ್ ಮತ್ತು ರೋರಿಂಗ್ ಸ್ಟಾರ್ ಶ್ರೀಮುರಳಿ ಸಾಕ್ಷಿಯಾಗಲಿದ್ದಾರೆ. ಈ ಮೂಲಕ ಯುವರಾಜಕುಮಾರ್ ಗೆ ತಮ್ಮ ಚಿಕ್ಕಪ್ಪಂದಿರು ಸಾಥ್ ಕೊಡಲಿದ್ದಾರೆ. ಪ್ರಸನ್ನ ಥಿಯೇಟರ್ ನಲ್ಲಿ ಅಡಿಯೋ ಲಾಂಚ್ ಆಗಲಿದೆ. ಇನ್ನು, ಶಿವಣ್ಣ, ರಾಘಣ್ಣ, ಪುನೀತ್, ಶ್ರೀಮುರಳಿ, ವಿಜಯ್ ರಾಘವೇಂದ್ರ ಪಿಆರ್ ಕೆ ಯೂ ಟ್ಯೂಬ್ ಚಾನೆಲ್ ನಲ್ಲಿ ಅಡಿಯೋ ಲಾಂಚ್ ಮಾಡಲಿದ್ದಾರೆ. ಈಗಾಗಲೇ ಪೋಸ್ಟರ್ ಮೂಲಕ ಭರವಸೆ ಹುಟ್ಟಿಸಿರುವ ಸಿನಿಮಾ ಹಾಡುಗಳೂ ಹಿಟ್ ಆಗಲಿವೆ ಎಂಬ ನಿರೀಕ್ಷೆಯಲ್ಲಿ ಚಿತ್ರತಂಡವಿದೆ.

Share this Story:

Follow Webdunia Hindi

ಮುಂದಿನ ಸುದ್ದಿ

ಭೀಮಸೇನ ನಳಮಹಾರಾಜ ಸಿನಿಮಾದಲ್ಲಿದೆ ನೀವು ನಿರೀಕ್ಷೆಯೇ ಮಾಡಿರದ ಕ್ಲೈಮ್ಯಾಕ್ಸ್!