Publish Date: Sat, 31 Oct 2020 (09:44 IST)
Updated Date: Sat, 31 Oct 2020 (09:46 IST)
ಬೆಂಗಳೂರು: ರಾಜರಾಜೇಶ್ವರಿ ನಗರ ಚುನಾವಣೆ ಸ್ಪರ್ಧಿ ಮುನಿರತ್ನ ಪರ ಪ್ರಚಾರ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನೋಡಲು ಬಂದ ಜನಸಾಗರ ನೋಡಿದರೆ ಇವರು ಕೊರೋನಾವನ್ನೇ ಮರೆತರೇನೋ ಎಂಬ ಸಂಶಯ ಮೂಡಿದ್ದು ನಿಜ.
ಮುನಿರತ್ನ ಜತೆಗೆ ತೆರೆದ ವಾಹನದಲ್ಲಿ ದರ್ಶನ್, ನಟಿ ಅಮೂಲ್ಯ, ಪತಿ ಜಗದೀಶ್ ಸೇರಿದಂತೆ ತಾರಾ ದಂಡು ಬಂದಿತ್ತು. ಈ ವೇಳೆ ನೂರಾರು ಜನರು ರಸ್ತೆಯಲ್ಲಿ ಅವರ ತೆರೆದ ವಾಹನಕ್ಕೆ ಮುತ್ತಿಗೆ ಹಾಕಿದ್ದರು. ಈ ವೇಳೆ ಹಲವರು ಮಾಸ್ಕ್ ಧರಿಸಿರಲಿಲ್ಲ. ಸಾಮಾಜಿಕ ಅಂತರವಂತೂ ಇರಲೇ ಇಲ್ಲ. ಒಂದು ಕ್ಷಣ ಕೊರೋನಾವನ್ನೇ ಮರೆತಂತೆ ಕಂಡುಬಂದರು. ಈ ವೇಳೆ ಸ್ವತಃ ದರ್ಶನ್ ಕೊರೋನಾ ಬಗ್ಗೆಯೂ ಜಾಗೃತಿ ಮೂಡಿಸುವ ಕೆಲಸ ಮಾಡಿದರು. ಆದರೆ ತಮ್ಮ ನೆಚ್ಚಿನ ನಟನನ್ನು ನೋಡುವ ಭರದಲ್ಲಿ ಜನರಿಗೆ ಮಾತ್ರ ಇದ್ಯಾವುದೂ ಕಿವಿಗೆ ಬಿದ್ದಂತೆ ಕಾಣಲಿಲ್ಲ.