ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಇನ್ನು ಸುಳ್ಳು ವದಂತಿಗಳನ್ನು ಹರಡಿದರೆ ಜೋಕೆ. ಸಾಮಾಜಿಕ ಜಾಲತಾಣಗಳ ಬಗ್ಗೆ ಕೇಂದ್ರ ಈಗಾಗಲೇ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.
ಕೊರೋನಾ ಲಸಿಕೆ ಹಂಚಿಕೆಗೆ ತಯಾರಿ ನಡೆಸುತ್ತಿರುವ ಕೇಂದ್ರ ಈ ಬಗ್ಗೆ ಯಾವುದೇ ವದಂತಿಗಳು ಹಬ್ಬದಂತೆ ತಡೆಯುವುದು ರಾಜ್ಯಗಳ ಜವಾಬ್ಧಾರಿಯಾಗಿದೆ ಎಂದು ಸೂಚನೆ ನೀಡಿದೆ. ಈ ಕಾರಣಕ್ಕೆ ಕೊರೋನಾ ಲಸಿಕೆ ಕುರಿತ ಸುಳ್ಳು ಸುದ್ದಿಗಳನ್ನು ಹರಡುವ ಮುನ್ನ ಎಚ್ಚರಿಕೆಯಿಂದಿರುವುದು ಉತ್ತಮ. ಲಸಿಕೆ ಬಗ್ಗೆ ತಪ್ಪು ಸಂದೇಶಗಳು, ವದಂತಿಗಳು ಹಬ್ಬಲು ಬಿಡಬಾರದು. ಒಮ್ಮೆ ವದಂತಿಗಳು ಹಬ್ಬಿ ಜನರ ಮನಸ್ಸಲ್ಲಿ ಅನುಮಾನ ಮೂಡಿದರೆ ನಂತರ ಲಸಿಕೆ ಹಾಕಲು ನಂಬಿಕೆ ಮೂಡಿಸುವುದು ಕಷ್ಟ ಎಂಬ ಕಾರಣಕ್ಕೆ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡಲು ಸೂಚಿಸಲಾಗಿದೆ.