ಕೊರೊನಾ ವೈರಸ್ ಅಟ್ಟಹಾಸ ಮುಂದುವರಿದಿರುವಂತೆ ಅದರ ತಡೆಗೆ ಬಾಲಿವುಡ್ ಮಂದಿ ಸಹಾಯ ಮಾಡುತ್ತಲೇ ಇದ್ದಾರೆ.ನಟ ಶಾರುಖ್ ಖಾನ್ ತಮ್ಮ ಕಚೇರಿಯನ್ನು ಕೊರೊನಾ ಪೀಡಿತರ ಚಿಕಿತ್ಸೆಗಾಗಿ ನೀಡಿದ್ಧಾರೆ.ಮುಂಬೈ ಮಹಾನಗರ ಪಾಲಿಕೆಯು ಶಾರುಖ್ ಖಾನ್ ಅವರ ಕಚೇರಿಯಲ್ಲಿ ಕೋವಿಡ್ ಐಸಿಯು ಘಟಕ ಆರಂಭಿಸಿದೆ.